ಡಾ. ಮುರಲೀಮೋಹನ್ ಚೂಂತಾರುರವರ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ 29ನೇ ಸಂಸ್ಥಾಪನಾ ದಿನಾಚರಣೆ

0

ಡಾ. ಮುರಲೀಮೋಹನ್ ಚೂಂತಾರುರವರ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ 29ನೇ ಸಂಸ್ಥಾಪನಾ ದಿನಾಚರಣೆಯನ್ನು
ಜು. 3ರಂದು ಆಚರಿಸಲಾಯಿತು. ಖ್ಯಾತ ವೇದ ವಿದ್ವಾಂಸರಾದ ಶಿವಪ್ರಸಾದ ಭಟ್ ಚೂಂತಾರು ದೀಪ ಬೆಳಗಿಸಿ ವೇದ ಷೋಷ ದೊಂದಿಗೆ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ಸಿಹಿ ತಿಂಡಿ ಹಂಚಿ ಟೂತ್ ಪೇಸ್ಟ್ ನೀಡಿ ಸಂಭ್ರಮಿಸಲಾಯಿತು. ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ. ಮುರಲೀಮೋಹನ್ ಚೂಂತಾರು, ಡಾ. ರಾಜಶ್ರೀ ಮೋಹನ್, ಡಾ ಪ್ರಜ್ವಲ್ ಶೆಟ್ಟಿ ಹಾಗೂ ದಂತ ಸಹಾಯಕಿಯರಾದ ರಮ್ಯಾ, ಚೈತ್ರ, ಸುಷ್ಮೀತಾ, ಜಯಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳೆದ 28 ವರುಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ಮಂಜೇಶ್ವರದ ಗ್ರಾಮೀಣ ಪರಿಸರದ ಜನತೆಗೆ ವಿಶ್ವ ದರ್ಜೆಯ ದಂತ ಚಿಕಿತ್ಸೆಯನ್ನು ನೀಡಿ ಜನಮನ್ನಣೆ ಪಡೆದಿರುವುದನ್ನು ಇಲ್ಲಿ ಸ್ಮರಿಸಲಾಯಿತು.