ನಿವೃತ್ತ ಪಿಡಿಒ ಹೂವಪ್ಪ ಗೌಡರವರಿಗೆ ತಾಲೂಕು ಪಂಚಾಯತ್ ನಲ್ಲಿ ಸನ್ಮಾನ

0

ಬಾಳಿಲ ಗ್ರಾಮ ಪಂಚಾಯತ್ ಪಿಡಿಒ ಹೂವಪ್ಪ ಗೌಡರವರು ಜೂ.30 ರಂದು ಸೇವಾ ನಿವೃತ್ತಿಗೊಂಡಿದ್ದು ಅವರಿಗೆ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸನ್ಮಾನ ಕಾರ್ಯಕ್ರಮವು ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಜಣ್ಣರವರು ಹೂವಪ್ಪ ಗೌಡರವರನ್ನು ಶಾಲು ಹೊದಿಸಿ,ಫಲ,ಪುಷ್ಮ ಸ್ಮರಣಿಕೆ ನೀಡಿ ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಮನರೇಗಾ, ಸಹಾಯಕ ನಿರ್ದೇಶಕರಾದ ರವಿಚಂದ್ರ, ಗೀತಾ ಬಿ ಪಂಚಾಯತ್ ರಾಜ್,ತಾಲ್ಲೂಕು ಪಂಚಾಯತ್ ಕಛೇರಿ ವ್ಯವಸ್ಥಾಪಕ ರಾದ ರಾಜಲಕ್ಷ್ಮಿ, ಶಾಸಕರ ಆಪ್ತ ಸಹಾಯಕ ಹರೀಶ್ ಹಾಗೂ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿ ಗಳು,ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.