ಗ್ರಾಮ ಸಭೆಯಲ್ಲಿ ಊರವರ ಆಗ್ರಹ
ಉಬರಡ್ಕ ಗ್ರಾಮದ ಜನರ ನಿದ್ದೆ ಗೆಡಿಸಿರುವ ಕಾಡಾನೆಗಳ ಹಿಂಡನ್ನು ಗ್ರಾಮದಿಂದ ಉದರ ಓಡಿಸಿ ಎಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ ಹಾಗೂ ಪಂಚಾಯತ್‌ವತಿಯಿಂದ ಊವರ ಹಾಗೂ ಅರಣ್ಯಾಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಈ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ ಘಟನೆ ಉಬರಡ್ಕ ಗ್ರಾಮ ಸಭೆಯಲ್ಲಿ ನಡೆದಿದೆ.















ಜು.೪ರಂದು ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂಣಿರ್ಮಾ ಸೂಂತೋಡು ಅಧ್ಯಕ್ಷತೆ ವಹಿಸಿದ್ದರು.
ಸಿಡಿಪಿ ಶೈಲಜಾ ದಿನೇಶ್ ನೋಡೆಲ್ ಅಧಿಕಾರಿಯಾಗಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಚಿತ್ರಕುಮಾರಿ ಪಾಲಡ್ಕ, ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಪ್ರಶಾಂತ್ ಪಾನತ್ತಿಲ, ಮಮತಾ ಕುದ್ಪಾಜೆ, ಭವಾನಿ ಮೂರ್ಜೆ, ಸಂದೀಪ್ ಕುತ್ತಮೊಟ್ಟೆ, ವಸಂತಿ ಹಾಗೂ ಇಲಾಖಾಧಿಕಾರಿಗಳು ಇದ್ದರು.
ಉಪವಲಯಾರಣ್ಯಾದಿಕಾರಿ ಸೀತಾರಾಮ, ಆನೆಗಳು ಕೃಷಿ ಹಾನಿಮಾಡಿರುವ ಮಾಹಿತಿ ಇದೆ. ಇಲಾಖೆ ಕಡೆಯಿಂದ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗಿದೆ. ಆನೆ ಬಾರದಂತೆ ಸೋಲಾರ್ ಬೇಲಿ, ಕಂದಕ ತೋಡಲು ಪ್ರಸ್ತಾಪ ಕಳುಹಿಸಲಾಗಿದೆ ಎಂದು ಹೇಳಿದರು. ಮಂಗಗಳ ಹಾವಳಿ ಹೆಚ್ಚಿದೆ ಎಂದು ರಾಹುಲ್ ಎಂಬವರು ಹೇಳಿದರು.
ಈ ವೇಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಎಂ.ಹೆಚ್‌ರವರು “ಶಾಶ್ವತ ಪರಿಹಾರ ಆಗಬೇಕು. ಆನೆ ಇಲ್ಲಿಂದ ಓಡಿಸುವ ಕೆಲಸ ಇಲಾಖೆ ಮತ್ತು ಪಂಚಾಯತ್ ಮಾಡಬೇಕು. ವಿಶೇಷ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು. ಸಭೆ ಕರೆದು ಸಮಾಲೋಚಿಸಿ ಮುಂದೆ ಹೋಗೋಣ ಎಂದು ಪಂಚಾಯತ್ ಅಧ್ಯಕ್ಷರು ಹೇಳಿದರು. ಸುಳ್ಯಕೋಡಿ ಮಾಧವ ಗೌಡ,, ಪಿ.ಎಸ್. ಗಂಗಾಧರ್ ಮೊದಲಾದವರು ಈ ವಿಚಾರದಲ್ಲಿ ಮಾತನಾಡಿದರು. ಸೂಂತೋಡು ಬಳಿ ಅಪಾಯದ ಮರ ಇದೆ. ಅದನ್ನು ತೆರವು ಮಾಡುವಂತೆ ಪಿ.ಎಸ್.ಗಂಗಾಧರ್ ಒತ್ತಾಯಿಸಿದರು.
ಗ್ರಾಮದ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರದಲ್ಲಿ ಹಲವು ಚರ್ಚೆಗಳು ನಡೆದವು.










