ಎಸಿಎಫ್ ವರ್ಗಾವಣೆ ಆದೇಶ ರದ್ದು ಆದೇಶಕ್ಕೆ ಕೆ.ಎ.ಟಿ. ತಡೆ

0

ಮತ್ತೆ ಸುಳ್ಯಕ್ಕೆ ಬಂದು ಅಧಿಕಾರ ವಹಿಸಿಕೊಂಡ ‌ ಎ.ಸಿ.ಎಫ್. ಪ್ರಶಾಂತ್ ಪೈ

ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಮಂಗಳೂರಿಗೆ ವರ್ಗಾಯಿಸಿ, ಮಂಗಳೂರಿನಲ್ಲಿ ಅರಣ್ಯ ಸಂಚಾರಿ ದಳದ ಎ.ಸಿ.ಎಫ್. ಆಗಿದ್ದ ಪ್ರಶಾಂತ್ ಕುಮಾರ್ ಪೈ ಯವರನ್ನು ಸುಳ್ಯಕ್ಕೆ ವರ್ಗಾವಣೆಗೊಳಿಸಿದ್ದ ಆದೇಶವನ್ನು ಸರಕಾರ ರದ್ದು ಪಡಿಸಿರುವುದಕ್ಕೆ ಕೆ.ಎ.ಟಿ. ತಡೆ ನೀಡಿದೆ. ಇದರಿಂದಾಗಿ ಪ್ರಶಾಂತ್ ಪೈಯವರು ಸುಳ್ಯದಲ್ಲಿ ಮತ್ತು ಪ್ರವೀಣ್ ಶೆಟ್ಟಿಯವರು ಮಂಗಳೂರಿನಲ್ಲಿ ಇರುವಂತಾಗಿದೆ.

ಮಂಗಳೂರು ಸಾಮಾಜಿಕ ಅರಣ್ಯ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈಯವರನ್ನು‌ ಸುಳ್ಯಕ್ಕೆ ಹಾಗೂ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಮಂಗಳೂರು ಸಾಮಾಜಿಕ ಅರಣ್ಯ ವಲಯಕ್ಕೆ ವರ್ಗಾವಣೆಗೊಳಿಸಿ ಜೂ.19 ರಂದು ಸರಕಾರ ಆದೇಶ ಮಾಡಿತ್ತು.

ಅದರಂತೆ ಜೂ.23ರಂದು ಪ್ರಶಾಂತ್ ಕುಮಾರ್ ಪೈಯವರು ಸುಳ್ಯಕ್ಕೆ ಬಂದು ಪ್ರವೀಣ್ ಶೆಟ್ಟಿಯವರಿಂದ ಅಧಿಕಾರ ಸ್ವೀಕರಿಸಿದ್ದರು. ಆದರೆ ಪ್ರವೀಣ್ ಶೆಟ್ಟಿಯವರು ಮಂಗಳೂರಿನ ಅರಣ್ಯ ಸಂಚಾರಿ ದಳದ ಎ.ಸಿ.ಎಫ್. ಹುದ್ದೆಯನ್ನು ವಹಿಸಿಕೊಂಡಿರಲಿಲ್ಲ.

ಈ ಮಧ್ಯೆ ಜೂ.19 ರಂದು ಮಾಡಿದ ವರ್ಗಾವಣೆ ಆದೇಶವನ್ನು ಸರಕಾರ ಜೂ.30ರಂದು ರದ್ದುಪಡಿಸಿತು. ಪರಿಣಾಮವಾಗಿ ಜು.1ರಂದು‌ ಬೆಳಗ್ಗೆ ಪ್ರವೀಣ್ ಕುಮಾರ್ ಶೆಟ್ಟಿ ಯವರು ಮತ್ತೆ ಸುಳ್ಯ ಎಸಿಎಫ್ ಆಗಿ ಕರ್ತವ್ಯ ವಹಿಸಿಕೊಂಡರು.

ಆದರೆ ಇಲ್ಲಿ ಅಧಿಕಾರ ಸ್ವೀಕರಿಸಿದ್ದ ಎಸಿಎಫ್ ಪ್ರಶಾಂತ್ ಕುಮಾರ್ ಪೈ ಯವರು ಅಂದೇ ಬೆಂಗಳೂರಿಗೆ ಹೋಗಿ ಸರಕಾರದ ವರ್ಗಾವಣೆ ರದ್ದತಿ ಆದೇಶದ ವಿರುದ್ದ ಕರ್ನಾಟಕ ರಾಜ್ಯ ಆಡಳಿತ‌ ನ್ಯಾಯ ಮಂಡಳಿ (ಕೆ.ಎ.ಟಿ.) ಮೇಲ್ಮನವಿ ಸಲ್ಲಿಸಿದರು.
ಕೆ.ಎ.ಟಿ.ಯು ಜು.2 ರಂದು ಸರಕಾರದ ಆದೇಶಕ್ಕೆ ತಡೆ ದೊರೆತಿದೆ. ಈ ಹಿನ್ನಲೆಯಲ್ಲಿ ಜು.3 ರಂದು ಬೆಳಗ್ಗೆ ಪ್ರಶಾಂತ್ ಕುಮಾರ್ ಪೈಯವರು ಪುನಹ ಬಂದು ಸುಳ್ಯ ಎ.ಸಿ.ಎಫ್. ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.