ಸೂಕ್ತ ಕ್ರಮ ಕೈಗೊಳ್ಳಲು ದೇವಸ್ಥಾನದವರಿಗೆ ಸಾರ್ವಜನಿಕರಿಂದ ಮನವಿ
ಸಚಿವರಿಗೂ ದೂರು
ಸುಬ್ರಹ್ಮಣ್ಯದ ಕೆ .ಎಸ್. ಎಸ್. ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಹರ್ಷಾಚರಣೆಯ ಸಂದರ್ಭ ತಮ್ಮ ಕಾಲೇಜ್ ಸಮವಸ್ತ್ರವನ್ನು ಹರಿದುಕೊಂಡ ವಿಡಿಯೋ ಒಂದು ವೈರಲ್ ಆಗಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿ, ಆಡಳಿತ ಮಂಡಳಿಗೂ, ಸಚಿವರಿಗೂ ದೂರು ಹೋಗಿರುವ ಘಟನೆ ವರದಿಯಾಗಿದೆ.








ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆಯ ಕೊನೆಯ ದಿನ ಕಾಲೇಜಿನ ಆವರಣದೊಳಗಡೆ ಹರ್ಷಾಚರಣೆ ಮಾಡಿದ್ದು, ಆ ಸಂದರ್ಭ ತಮ್ಮ ಯೂನಿಫಾರ್ಮ್ ಅನ್ನು ತಾವೇ ಹರಿದು ಬಿಸಾಡಿದ್ದರು. ಇದು ವಿದ್ಯಾರ್ಥಿಗಳೇ ಮಾಡಿದ ವಿಡಿಯೋದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು.
ಇದನ್ನು ಕಂಡ ಸಾರ್ವಜನಿಕರು, ಕಾಲೇಜ್ ಯುನಿಫಾರ್ಮನ್ನು ಹರಿದು ಬಿಸಾಡುವ ದೃಶ್ಯ ತಪ್ಪು ಸಂದೇಶ ಕೊಡುವಂತಾದಾದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ನೀಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಮುಜರಾಯಿ ಸಚಿವರಿಗೂ ಸಾರ್ವಜನಕರು ವಿಡಿಯೋ ಕಳುಹಿಸಿರುವುದಾಗಿ ತಿಳಿದು ಬಂದಿದೆ.










