ಜು.7 ರಂದು ಗಾಂಧಿನಗರ ಕೆ. ಪಿ. ಎಸ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘ ಗಳ ಉದ್ಘಾಟನೆ ನಡೆಯಿತು. ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಚಂದ್ರಶೇಖರ ಪೇರಾಲು ಉದ್ಘಾಟಿಸಿದರು.








ನೋಡಲ್ ಶಿಕ್ಷಕ ರಾದ ಚಿನ್ನಪ್ಪಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ, ಅಬ್ದುಲ್ ಸಮದ್, ಉಪನ್ಯಾಸಕರು, ಮುಖ್ಯ ಶಿಕ್ಷಕರಾದ ಜ್ಯೋತಿಲಕ್ಷ್ಮಿ, ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಕು, ಸಫುವಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುಮಾರಿ ಆರ್ಶಿಯಾ ತಾಜ್, ಕಾರ್ಯಕ್ರಮ ನಿರೂಪಿಸಿದರು, ಕು. ಅಂಜಲಿ ಸಾಗತಿಸಿ, ಮಹಮ್ಮದ್ ಅಸ್ಲಾಂ ವಂದನಾರ್ಪಣೆಗೈದರು.










