














ಭಾರತೀಯ ಜನತಾ ಪಕ್ಷ ಕೂತ್ಕುಂಜ ಒಂದನೇ ವಾರ್ಡ್ ವತಿಯಿಂದ ಗುರುಪೂರ್ಣಮಿ ಅಂಗವಾಗಿ ಗುರುವಂದನೆ ಕಾರ್ಯಕ್ರಮ ನಡೆಯಿತು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಸಂಸ್ಥೆಯಲ್ಲಿ ಸುಮಾರು 39 ವರ್ಷಗಳ ಅಧ್ಯಾಪನ ಸೇವೆಯನ್ನು ಸಲ್ಲಿಸಿದ ಶ್ರೀಮತಿ ರತ್ನಾವತಿ ಧರ್ಮ ಪಾಲಗೌಡ ಕಕ್ಯಾನ ಇವರಿಗೆ ಗುರುವಂದನೆಯನ್ನು ಪಕ್ಷದ ವತಿಯಿಂದ ಅವರ ಸ್ವಗೃಹದಲ್ಲಿ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾರ್ಯಪ್ಪ ಗೌಡ ಚಿದ್ಗಲ್. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಶಾಸ್ತ್ರಿ ಪುತ್ಯ ನಿರ್ದೇಶಕರಾದ ತಿಮ್ಮಪ್ಪ ಗೌಡ ಕೂತ್ಕುಂಜ. ಧರ್ಮಪಾಲಗೌಡ ಕಕ್ಯಾನ. ವೆಂಕಟೇಶ್ವರ ಜೋಯಿಸ್ ಹೆಬ್ಬಾರಹಿತಿಲು. ಯೋಗೀಶ್ ಗೌಡ ಚಿದ್ಗಲ್. ದಿವಾಕರ ಗೌಡ ಬಿಳಿಮಲೆ. ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ. ಶ್ರೀಮತಿ ಜಾನಕಿ ಕಕ್ಯಾನ. ಉಪಸ್ಥಿತರಿದ್ದರು.ಬೂತು ಸಮಿತಿ ಅಧ್ಯಕ್ಷ ಜಯರಾಮ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ನಾಗೇಶ್ ಕುಳ್ಳಾಜೆ ವಂದಿಸಿದರು










