ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ವಿತರಣೆ

0

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲೋಕನಾಥ ಶೆಟ್ಟಿ ಹಾಗೂ ರಂಜಿತ್ ರೈ ಅವರ ಕೊಡುಗೆಯಾದ ಶನಿವಾರದ ಸಮವಸ್ತ್ರದ ವಿತರಣೆ ಕಾರ್ಯಕ್ರಮವು ಜು.09 ರಂದು ನಡೆಯಿತು.


ಸಮವಸ್ತ್ರದ ದಾನಿಗಳಾಗಿರುವ ಲೋಕನಾಥ ಶೆಟ್ಟಿಯವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ , ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯ ಆಚಾರ್ಯ, ಉಪಾಧ್ಯಕ್ಷೆ ಶ್ರೀಮತಿ ಸವಿತಾ ,ಪೆರುವಾಜೆ ಪಂಚಾಯತ್ ವಾರ್ಡ್ ಸದಸ್ಯರಾದ ಪದ್ಮನಾಭ ಶೆಟ್ಟಿ , ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರುತಿ , ಶಿಕ್ಷಕವೃಂದ, ಪೋಷಕರು, ಎಸ್ .ಡಿ. ಎಂ. ಸಿ ಸದಸ್ಯರು ಉಪಸ್ಥಿತರಿದ್ದರು.