ಬೆಳ್ಳಾರೆ ಮದ್ರಸಾದಲ್ಲಿ ಮುಅಲ್ಲಿಮ್ ಡೇ ಕಾರ್ಯಕ್ರಮ

0


ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಅಧ್ಯಾಪಕರುಗಳ ದಿನಾಚರಣೆಯ ಅಂಗವಾಗಿ ಸಭಾಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜಮಾಅತ್ ಅಧ್ಯಕ್ಷರಾದ ಯು ಎಚ್. ಅಬೂಬಕ್ಕರ್ ವಹಿಸಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಬಹು ನಸೀಹ್ ದಾರಿಮಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ವಿಷಯ ಮಂಡಿಸಿದರು.

ಮದರಸ ಅಧ್ಯಾಪಕರುಗಳಾದ ಬಹು. ಜೈನುದ್ದೀನ್ ಮುಸ್ಲಿಯಾರ್, ಬಹು ಆರಿಫ್ ಹುದವಿ, ಬಹು ಅರ್ಷದ್ ಫೈಝಿ ಮುಂತಾದವರು ಮಾತನಾಡಿದರು ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಬಶೀರ್ ಕಲ್ಲಪನೆ, ಸದಸ್ಯರುಗಳಾದ ಉಸ್ಮಾನ್ ಹಾಜಿ, ಅಝರುದ್ದೀನ್, ಕೆ.ಅಬ್ದುಲ್ ಬಶೀರ್, ಮುಅಝಿನ್ ಬಹು ಶರೀಫ್ ನಿಝಾಮಿ, ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಆರಿಫ್ ಬೆಳ್ಳಾರೆ, ಹಾಗೂ ಜಮಾಅತರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಧ್ಯಾಪಕರಾದ ಬಹು ಶಾಕಿರ್ ಫೈಝಿ ಸ್ವಾಗತಿಸಿ, ಬಹು ಝಕರಿಯ್ಯಾ ಮೌಲವಿ ವಂದಿಸಿದರು