ಭವಾನಿಶಂಕರ ಅಡ್ತಲೆಯವರಿಗೆ ಸಹೋದರಿಯರ ಮಕ್ಕಳು ಹಾಗೂ ಅವರ ಕುಟುಂಬಸ್ಥರಿಂದ ಸನ್ಮಾನ

0

ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮತ್ತು ಎಒಎಲ್ಇ ಕಮಿಟಿ ಬಿ ಯ ಆಡಳಿಕ್ಕೊಳಪಟ್ಟ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಂದ ನೇಮಿಸಲ್ಪಟ್ಟ ಭವಾನಿಶಂಕರ ಅಡ್ತಲೆಯವರಿಗೆ ಅವರ ಸಹೋದರಿಯರ ಮಕ್ಕಳು ಹಾಗೂ ಅವರ ಕುಟುಂದವರಿಂದ ಸನ್ಮಾನ ಕಾರ್ಯಕ್ರಮ ಜು. 13ರಂದು ಭವಾನಿಶಂಕರ ಅಡ್ತಲೆಯವರ‌ ಮನೆಯಲ್ಲಿ ನಡೆಯಿತು.


ಭವಾನಿಶಂಕರ ಅಡ್ತಲೆಯವರಿಗೆ ಓರ್ವ‌ ಸಹೋದರ ಮತ್ತು ಮೂವರು ಸಹೋದರಿಯರಿದ್ದು, ಅವರೆಲ್ಲರೂ ತೀರಿಕೊಂಡ ಹಿನ್ನೆಲೆಯಲ್ಲಿ ಭವಾನಿಶಂಕರ ಅಡ್ತಲೆಯವರು ಒಬ್ಬರೇ ಅವರೆಲ್ಲರಿಗೂ ಸೋದರ ಮಾವನಾಗಿ ಮತ್ತು ಹಿರಿಯರಾಗಿರುವುದರಿಂದ ಪ್ರೀತಿಯ ಸಂಕೇತವಾಗಿ ಈ ಸನ್ಮಾನ ಕಾರ್ಯಕ್ರಮ ನೆರವೇರಿಸಿದ್ದಾರೆ.
ಭವಾನಿಶಂಕರ ಅಡ್ತಲೆಯವರ ಹಿರಿಯ ಸಹೋದರಿಯ ಮಗ ಭರತ್ ಸಂಪಾಜೆ, ಪುಷ್ಪಾವತಿ ಹಾಗೂ ಮಕ್ಕಳು, ನಾರಾಯಣ, ಶೀಲಾವತಿ ಹಾಗೂ ಮಕ್ಕಳು, 2ನೇ ಸಹೋದರಿ‌ ಮೀನಾಕ್ಷಿಯವರ ಮಕ್ಕಳಾದ ವಸಂತ ಊರುಬೈಲು, ಸವಿತಾ ಮತ್ತು ಮಕ್ಕಳು, ಪುರುಷೋತ್ತಮ ಊರುಬೈಲು ಮತ್ತು ಧನಲಕ್ಷ್ಮಿ ಹಾಗೂ ಮಕ್ಕಳು, ಗೋಪಾಲಕೃಷ್ಣ, ಹರಿಪ್ರಸಾದ್, ಲಿಖಿತ ಮತ್ತು ಮಕ್ಕಳು, ಭಾರತಿ ಬಂಗಾರಕೋಡಿ ಮತ್ತು ಮಕ್ಕಳು, ಕಿರಿಯ ಸಹೋದರಿಯ ಮಗಳು ಯೋಗಿತಾ ಸೇರಿದಂತೆ ಸುಮಾರು 28 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.