ಸುಳ್ಯದಲ್ಲಿ ದಿಯಾ ಕನ್ ಸ್ಟ್ರಕ್ಷನ್ಸ್ ಮತ್ತು ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

0

ಯೋಗಿತ್ ಪಂಜ ಅವರ ಮಾಲಕತ್ವದ ದಿಯಾ ಕನ್ ಸ್ಟ್ರಕ್ಷನ್ಸ್ ಮತ್ತು ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಜುಲೈ 14 ರಂದು ಸುಳ್ಯದ ಸಿ.ಎ. ಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಸಿವಿಲ್ ಇಂಜಿನಿಯರ್ ಶ್ಯಾಮ ಪ್ರಸಾದ್ ಎ.ವಿ. ಸಂಸ್ಥೆಯನ್ನು ಉದ್ಘಾಟಿಸಿ, ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಉದ್ಯಮಗಳೂ ಬೆಳೆಯಬೇಕು. ಬೆಳೆಯುತ್ತಿರುವ ಸುಳ್ಯದಲ್ಲಿ ಇದು ಉತ್ತಮ ಸಂಸ್ಥೆಯಾಗಿ ಗ್ರಾಹಕರಿಗೆ ಉಪಕಾರಿಯಾಗಲಿ ಎಂದರು.

ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಪುರೋಹಿತ ನಟರಾಜ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮಾಲಕರಾದ ಯೋಗಿತ್ ಪಂಜ ಸ್ವಾಗತಿಸಿ ವಂದಿಸಿದರು. ವಚನ್ ಕಾರ್ಯಕ್ರಮ ನಿರೂಪಿಸಿದರು. ಲೋಕನಾಥ್ ನಾಯರ್ ಕೆರೆ, ಶ್ರೀಮತಿ ಶೀಲಾವತಿ ಲೋಕನಾಥ್, ಕು. ಯಶ್ಮಿತಾ, ವೇಣುಗೋಪಾಲ ನಾಯರ್ ಕೆರೆ, ಕು. ದಿವ್ಯ ಕುಳ್ಳಾಜೆ ಹಾಗೂ ಮಾಲಕರ ಕುಟುಂಬ ವರ್ಗದವರು, ಹಿತೈಷಿಗಳು ಉಪಸ್ಥಿತರಿದ್ದರು.

ಪ್ಲಾನಿಂಗ್ ಮತ್ತು ಡ್ರಾಪ್ಟಿಂಗ್, ಎಸ್ಟಿಮೇಶನ್, ಕನ್ ಸ್ಟ್ರಕ್ಷನ್ಸ್, ರಿನೋವೇಶನ್, ರಿಯಲ್ ಎಸ್ಟೇಟ್, ಇಂಟಿಯರ್ ಪ್ಯಾಬ್ರಿಕೇಶನ್ ಗಳಾದ ಫಾಲ್ಸ್ ಸೀಲಿಂಗ್, ಪಾರ್ಟಿಶೀನ್, ಕಿಚನ್ ಕ್ಯಾಬಿನೆಟ್, ಬೆಡ್ ರೂಂ ವಾರ್ಡ್ ರೋಬ್, ಶೋಕೇಶ್, ಓಪನ್ / ಸ್ಲೈಡಿಂಗ್ ಡೋರ್ & ವಿಂಡೋ, ಅಲ್ಲದೆ ಕಲರ್ ಮತ್ತು ಬ್ಲಾಕ್ & ವೈಟ್ ಝೆರಾಕ್ಸ್, ಕಲರ್ & ಬ್ಲಾಕ್ & ವೈಟ್ ಪ್ರಿಂಟಿಂಗ್, ಲಾಮಿನೇಶನ್ ನಮ್ಮಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.