ಜೀಪು ಚಾಲಕನಿಗೆ ಬೈಕ್ ಸವಾರನಿಂದ ಥಳಿತ
ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ಮುಖ್ಯ ರಸ್ತೆಯಲ್ಲಿ ಬೈಕಿನ ಹಿಂಬದಿಗೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನಿಗೆ ಹಾಗೂ ಹಿಂದುಗಡೆ ಬೈಕಿನಲ್ಲಿ ಕುಳಿತಿದ್ದ ಮಹಿಳೆ ಗಾಯಗೊಂಡರಲ್ಲದೆ ಜೀಪು ಚಾಲಕನಿಗೆ ಸವಾರ ಥಳಿಸಿದ ಘಟನೆ ವರದಿಯಾಗಿದೆ.









ಅಫಘಾತ ಸಂಭವಿಸಿದ ಸಂದರ್ಭದಲ್ಲಿ ಬೈಕ್ ಸವಾರ ಸಿಟ್ಟುಗೊಂಡು ಜೀಪು ಚಾಲಕನ್ನು ತರಾಟೆಗೆತ್ತಿಕೊಂಡು ಆತನ ಮೇಲೆ ಥಳಿಸಿ ಹಲ್ಲೆ ನಡೆಸಿರುವ ಘಟನೆಯು ನಡೆಯಿತು.
ಇದರಿಂದಾಗಿ ಒಂದು ಕ್ಷಣ ಪರಿಸ್ಥಿತಿ ಹದಗೆಡುವ ಸಾಧ್ಯತೆ ಕಂಡು ಬಂತು.
ಅಷ್ಟರಲ್ಲಿ ಗಾಯಗೊಂಡ ಸವಾರರ ಸಂಬಂಧಿಕರು ಬಂದು ಗಾಯಗೊಂಡ ಮಹಿಳೆಯನ್ನುಸವಾರನನ್ನು ಕಾರಿನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳದಲ್ಲಿ ಜನ ಜಮಾಯಿಸಿದರಲ್ಲದೆ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಯಿತು. ಇದೇ ಸಂದರ್ಭದಲ್ಲಿ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕಾರ್ಮಿಕರ ಸಂಘಟನೆ ವತಿಯಿಂದ ನಡೆಸಲು ಉದ್ಧೇಶಿಸಿದ ಪ್ರತಿಭಟನಾ ಸಭೆಗೆ ಜನ ಸೇರಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಲೀಸರು ಪರಿಸ್ಥಿತಿಯನ್ನು ತಿಳಿ ಗೊಳಿಸಿದರು.










