ಅಲೆಟ್ಟಿ -ಬಡ್ಡಡ್ಕ- ಕೂರ್ನಡ್ಕಕ್ಕೆ ಸರಕಾರಿ ಬಸ್ ಸಂಚಾರ ಇಂದಿನಿಂದ ಆರಂಭ

0

ಪಂ. ಅಧ್ಯಕ್ಷರಿಂದ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ

ಅರತಿ ಬೆಳಗಿ ಸ್ವಾಗತಿಸಿದ
ಕಾಂಗ್ರೆಸ್ ನಾಯಕರು ಹಾಗೂ ಸಾರ್ವಜನಿಕರು

ಆಲೆಟ್ಟಿ -ಬಡ್ಡಡ್ಕ –
ಕೂರ್ನಡ್ಕಕ್ಕೆ ಇಂದಿನಿಂದ ನೂತನವಾಗಿಕೆ.ಎಸ್.ಆರ್.ಟಿ.ಸಿ ಬಸ್ಸು ಸಂಚಾರ ಆರಂಭಗೊಂಡಿದ್ದು ಜು.14 ರಂದು ಬೆಳಗ್ಗೆ ಬಡ್ಡಡ್ಕ ಜಂಕ್ಷನ್ ನಲ್ಲಿ ಬಸ್ಸು ಸಂಚಾರಕ್ಕೆ ಚಾಲನೆ ನೀಡಲಾಯಿತು.

ನೂತನವಾಗಿ ಆರಂಭಗೊಂಡಸರಕಾರಿ ಬಸ್ಸಿಗೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ ಯವರು ತೆಂಗಿನಕಾಯಿ ಒಡೆದು ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ
ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ ಅಡಿಂಜ, ತಾಲೂಕು ಪಂಚಾಯತ್ ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಶ್ರೀಮತಿ ಗೀತಾ ಕೊಲ್ಚಾರು, ಪಂಚಾಯತ್ ಸದಸ್ಯೆ ಭಾಗೀರಥಿ ಪತ್ತುಕುಂಜ, ಕಾಂಗ್ರೆಸ್ ನಾಯಕರಾದ ಗೋಕುಲದಾಸ್ ಸುಳ್ಯ, ತೇಜಕುಮಾರ್ ಬಡ್ಡಡ್ಕ, ಪ್ರಸನ್ನ ಬಡ್ಡಡ್ಕ, ದೋಣಿಮೂಲೆ ಪುರುಷೋತ್ತಮ, ನವೀನ್ ಕುಮಾರ್ ಗುಂಡ್ಯ, ಪವಿತ್ರನ್ ಗುಂಡ್ಯ, ಕೇಶವ ಮೊರಂಗಲ್ಲು ಮತ್ತಿತರರು ಉಪಸ್ಥಿತರಿದ್ದರು.
ಈ ಭಾಗದ ಜನರ
ಬಹು ಬೇಡಿಕೆಯಾಗಿದ್ದ ಬಸ್ಸು ಸಂಚಾರದ ಆರಂಭಿಸುವ ಕುರಿತು ಸಾರಿಗೆ ಸಚಿವರಾದ ರಾಮ ಲಿಂಗಾ ರೆಡ್ಡಿಯವರು ಇತ್ತೀಚೆಗೆ ಸುಬ್ರಹ್ಮಣ್ಯಕ್ಕೆ ಬಂದಿರುವಾಗ ಗ್ರಾಮ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ ಮತ್ತು ರಾಧಾಕೃಷ್ಣ ಪರಿವಾರಕಾನ, ಧರ್ಮಪಾಲ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ ರವರ ಸಮ್ಮುಖದಲ್ಲಿ ಮನವಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ತಕ್ಷಣ ಸೂಚಿಸಿದ್ದು ಇದೀಗ
ಬಹು ವರ್ಷದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆಯೂ ಆಲೆಟ್ಟಿ ಗ್ರಾಮಕ್ಕೆ ಸರಕಾರಿ ಬಸ್ಸು ಒದಗಿಸುವಂತೆ ಸಾಕಷ್ಟು ಭಾರಿ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದರು. ಇದೀಗ ಬೇಡಿಕೆ ಈಡೆರಿದ್ದು
ಬಸ್ ಸಂಚಾರ ಆರಂಭಗೊಂಡ ಸಂಭ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ನಾಗರಿಕರು ಬಸ್ಸಿಗೆ ಹೂ ಮಾಲೆ ಹಾಕಿ, ಆರತಿ ಬೆಳಗಿ ಚಾಲಕರಿಗೆ ಪುಷ್ಪ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.