ಕಂಡಕ್ಟರ್, ನಿರ್ವಾಹಕರ ಕೊರತೆಯಿಂದಾಗಿ ಸ್ಥಗಿತಗೊಂಡಿದ್ದ ಉಬರಡ್ಕ ಗ್ರಾಮಕ್ಕೆ ಸಂಜೆ 5.15 ಕ್ಕೆ ಹೊರಡುತ್ತಿದ್ದ ಬಸ್ ಇಂದಿನಿಂದ ಪುನರಾರಂಭ ಗೊಂಡಿರುವುದಾಗಿ ಕೆಎಸ್ ಆರ್.ಟಿ.ಸಿ. ಅಧಿಕಾರಿ ಅಬೂಸಾಲಿಯವರು ಮಾಹಿತಿ ನೀಡಿದ್ದಾರೆ.









ಕಳೆದ ಮೂರು, ನಾಲ್ಕು ತಿಂಗಳಿನಿಂದ ಉಬರಡ್ಕಕ್ಕೆ ಸಂಜೆ 5.15 ಕ್ಕೆ ಹೊರಡುತ್ತಿದ್ದ ಬಸ್ ಸ್ಥಗಿತವಾಗಿತ್ತು.ಆ ಬಸ್ ಪುನರಾರಂಭ ಮಾಡಬೇಕೆಂದು ಉಬರಡ್ಕ ಭಾಗದವರು ಕೆ.ಎಸ್.ಆರ್.ಟಿ.ಸಿ.ಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದನೆ ನೀಡಿರುವ ಅಧಿಕಾರಿಗಳು ಜು.17 (ಇಂದಿನಿಂದ) ಬಸ್ ಪುನರಾರಂಭ ಮಾಡಿದ್ದಾರೆ.










