ಸುಳ್ಯದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ

0

ಏನೆಕಲ್ ಹಾಲು ಉತ್ಪಾದಕರ ಸ.ಸಂಘಕ್ಕೆ ಸತತ 5ನೇ ಬಾರಿಗೆ ತಾಲೂಕಿನ ಉತ್ತಮ ದ್ವಿತೀಯ ಸಂಘ ಪ್ರಶಸ್ತಿ

ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನ ಸಭೆಯು ಜು. 18 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು,ಹಾಗೂ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

ಸಭೆಯಲ್ಲಿ ತಾಲೂಕಿನ ಉತ್ತಮ ದ್ವಿತೀಯ ಸಂಘವೆಂದು ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘವು ಆಯ್ಕೆ ಆಗಿದ್ದು,ಸಂಘವು ಸತತ ಐದನೇ ಬಾರಿಗೆ ಉತ್ತಮ ಸಂಘವೆಂದು ಕೀರ್ತಿಗೆ ಪಾತ್ರವಾಗಿದೆ.

ಸಂಘದ ಅಧ್ಯಕ್ಷ ಹಾಗೂ ಪ್ರಸ್ತುತ ಕೆಎಂಎಫ್ ನಿರ್ದೇಶಕರಾಗಿರುವ ಭರತ್ ನೆಕ್ರಾಜೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಶಿವಪ್ರಸಾದ್ ಮಾದನಮನೆ,
ನಿರ್ದೇಶಕರಾದ ಗಣೇಶ್ ಕೆಬ್ಬೊಡಿ, ದಿನೇಶ್ ಕೈಯಾಳ, ರಮೇಶ್ ಬೂದಿಪಳ್ಳ, ಕಾರ್ಯದರ್ಶಿ ಗೀತಾ ಉಪಸ್ಥಿತರಿದ್ದರು.