ಎಡಮಂಗಲ ಸಂಘಕ್ಕೆ ಪ್ರಥಮ, ಏನೆಕಲ್ಲು ಸಂಘಕ್ಕೆ ದ್ವಿತೀಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯು ಜು.18 ರಂದು ಸುಳ್ಯ ಸಿ.ಎ ಬ್ಯಾಂಕಿನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು.

ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ತಾಲೂಕಿನಲ್ಲಿ ಒಟ್ಟು 52 ಸಂಘಗಳಿದ್ದು 10,746 ಮಂದಿ ಸದಸ್ಯರನ್ನು ಹೊಂದಿದೆ. ಹಾಲು ಹಾಕುವ ಸದಸ್ಯರ 1653 ಮಂದಿ
ಶೇ. 15.38% ರಷ್ಟು ಇರುವುದು. ಸ್ವಂತ ಕಟ್ಟಡ 29 ಸಂಘಗಳು ಹೊಂದಿರುತ್ತವೆ. 2024-25 ನೇ ಸಾಲಿನಲ್ಲಿ ಒಕ್ಕೂಟದ ವಾರ್ಷಿಕ ವ್ಯವಹಾರ 1174 ಕೋಟಿಯಾಗಿದ್ದು ನಿವ್ವಳ ಲಾಭ 12.80 ಕೋಟಿ ಗಳಿಸಿದೆ. ದ.ಕ.ಜಿಲ್ಲೆಯಲ್ಲಿ ಕಳೆದ ವಾರ್ಷಿಕ ಅವಧಿಯಲ್ಲಿ ಒಕ್ಕೂಟದಿಂದ ನೀಡಿದ ಹಾಕಿನ ಪ್ರೋತ್ಸಾಹ ಧನ 870.07 ಲಕ್ಷ ಹಾಗೂ ಸುಳ್ಯ ತಾಲೂಕಿಗೆ 54.09 ಲಕ್ಷ ನೀಡಲಾಗಿದೆ. ಈರೋಡ್ ಹೊರಜಿಲ್ಲೆಯಿಂದ ರಾಸು ಖರೀದಿಯ ಬಾಬ್ತು 12 ರಾಸುಗಳಿಗೆ 60 ಸಾವಿರ ಅನುದಾನ ತಾಲೂಕಿಗೆ ನೀಡಲಾಗಿದೆ. 2024- 25 ರಲ್ಲಿ ಒಕ್ಕೂಟದಿಂದ ರೂ.54,08,756 ಪ್ರೋತ್ಸಾಹ ಧನ ನೀಡಲಾಗಿದೆ. ತಾಲೂಕಿನಲ್ಲಿ 8 ಬಿ.ಎಂ.ಸಿ ಕೇಂದ್ರಗಳಿದ್ದು 44 ಕ್ಲಸ್ಟರ್ ಸಂಘಗಳು ದಿನವಹಿ 13,227 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ಡಾ.ರವಿರಾಜ್ ಉಡುಪ ರವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಭೆಯಿಂದ ಹೈನುಗಾರರು ಮಾತನಾಡಿ ಪಶು ಆಹಾರದ ವಿಚಾರವಾಗಿ 6 ತಿಂಗಳ ಹಿಂದೆ ಸಮಸ್ಯೆ ಉದ್ಭವಿಸಿತ್ತು.
ಕಚ್ಚಾ ವಸ್ತುಗಳ ಬದಲಾವಣೆಯಾಗಿ ದರದಲ್ಲಿ ಏರು ಪೇರಾದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಪಿ.ಐ.ಎಸ್ ಫೀಡ್ಸ್ ಇರುವ ಪಶು ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ಕೆ.ಎಂ.ಎಫ್ ನಿಂದ ಉತ್ಕೃಷ್ಟ ಗುಣ ಮಟ್ಟದ ಪಶು ಆಹಾರ ತಯಾರಿಸಲಾಗಿದೆ. ಖಾಸಗಿಯವರ ಪಶು ಆಹಾರ ಖರೀದಿಯಿಂದ ಹೊರತು ಪಡಿಸಿ ಕೆ.ಎಂ.ಎಫ್ ನಿಂದ ನಂದಿನಿ ಪಶು ಆಹಾರ ಖರೀದಿಸುವಂತೆ ಸೂಚಿಸಿದರು. ರೈತರಿಗೆ ಅರಿವು ಮೂಡಿಸುವ ಕಾರ್ಯ ಕಾರ್ಯದರ್ಶಿ ಯವರು ನಿರ್ವಹಿಸಬೇಕು ಎಂದು ಎಂ.ಡಿ ಯವರು ತಿಳಿಸಿದರು.








ಅರಕೂಲುಗೂಡು ಪಶು ಆಹಾರ ಉತ್ಕೃಷ್ಟ ಗುಣಮಟ್ಟದಲ್ಲಿದೆ. ಅದನ್ನು ತರಿಸಿಕೊಡುವ ವ್ಯವಸ್ಥೆ ಮಾಡಬೇಕೆಂದು ಹೈನುಗಾರರು ಬೇಡಿಕೆ ಇರಿಸಿದರು.
ಮಂಡೆಕೋಲು ಸಂಘದಿಂದ ಸೌಲಭ್ಯ ಪಡೆದ ಸದಸ್ಯರೊಬ್ಬರು ಪಕ್ಕದ ಕೇರಳ ರಾಜ್ಯಕ್ಕೆ ಹಾಲು ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅವಕಾಶ ನೀಡಬಾರದು ಎಂದು ಸದಾನಂದ ಮಾವಜಿ ಯವರು ತಿಳಿಸಿದರು.
ನಮ್ಮ ಸಂಘಕ್ಕೆ ಹಾಲು ಹಾಕದವರಿಗೆ ನಮ್ಮ ಒಕ್ಕೂಟದ ಪಶು ಆಹಾರ ಒದಗಿಸಿಕೊಡುವ ವ್ಯವಸ್ಥೆ ಮಾಡಬಾರದು. ಮೊದಲು ಹಾಲು ಹಾಕುವಂತೆ ಪ್ರೇರೆಪಿಸಿ ಬಳಿಕ ಸೌಲಭ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಆದೇಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಉತ್ತಮ ಸಂಘ ಎಡಮಂಗಲ ಸ.ಹಾ.ಉ.ಸಂಘ ಪ್ರಥಮ ಸ್ಥಾನಿಯಾಗಿ ಮತ್ತು ಏನೆಕಲ್ಲು ಸ.ಹಾ.ಉ.ಸಂಘವು ದ್ವಿತೀಯ ಸ್ಥಾನಿ ಎಂದು ಘೋಷಣೆ ಮಾಡಲಾಯಿತು. ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಉತ್ತಮ ಗುಣ ಮಟ್ಟದ ಸಂಘ ಎಂದು ಪಂಜ ಸ.ಹಾ.ಉ.ಸಂಘ, ಮಧ್ಯಮ ವರ್ಗದ ಹೈನುಗಾರ ಎಡಮಂಗಲ ಸಂಘದ ಶ್ರೀಮತಿ ಪುಷ್ಪಾವತಿ, ಹಸಿರು ಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರ ಅರಂತೋಡಿನ ಲೋಕಯ್ಯ ಪಿ.ಎಸ್, ರಾಸುಗಳಿಗೆ ಕೃತಕಾ ಗರ್ಭದಾರಣೆ ಕಾರ್ಯಕರ್ತರ ಪೈಕಿ ಹರಿಯಪ್ಪ, ಶ್ರೀಮತಿ ಯೋಗೀಶ್ವರೀ ಯವರನ್ನು ಸನ್ಮಾನಿಸಲಾಯಿತು. ಪ್ರತಿಯೊಬ್ಬ ಸನ್ಮಾನಿತರಿಗೆ ಒಕ್ಕೂಟದ ವತಿಯಿಂದ ಬೆಳ್ಳಿ ನಾಣ್ಯ, ಪ್ರಶಸ್ತಿ ಪತ್ರ, ಶಾಲು ಸ್ಮರಣಿಕೆ ಹಾಗೂ ನಂದಿನಿ ಉತ್ಪನ್ನಗಳನ್ನು ನೀಡಲಾಯಿತು.
ಬಳಿಕ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಉತ್ತಮ್ ಕೆ, ಚಿಂತನ್ ಕೆ.ಆರ್, ಪ್ರಜ್ಞಾ ಎನ್, ಬೃಂದಾ,ಸೃಜನ್ ಕೆ, ಅನನ್ಯ ಕೆ.ಎನ್, ಪ್ರಜ್ವಲ್ ಕೆ.ವಿ, ಕೃತಿ ಪಿ, ದ್ವಿತೀಯ ಪಿ.ಯು.ಸಿ ಯಲ್ಲಿ ಚರಿಷ್ಮ, ಪ್ರೇಕ್ಷಾ ಬಿ.ಸಿ, ಜ್ಯೋತಿಕಾ, ಅನಂತಕೃಷ್ಣ ಎನ್, ನಿಕ್ಷಿತಾ ರೈ, ರಶ್ಮಿ ಕೆ.ಎಸ್ ರವರನ್ನು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಒಕ್ಕೂಟದ ವತಿಯಿಂದ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಯವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ
ಒಕ್ಕೂಟದ ಮಾಜಿ ಉಪಾಧ್ಯಕ್ಷರು,ನಿರ್ದೇಶಕ ಎಸ್.ಬಿ.ಜಯರಾಮ ರೈ, ನಿರ್ದೇಶಕ ಭರತ್ ನೆಕ್ರಾಜೆ, ನಿರ್ದೇಶಕಿ ಶ್ರೀಮತಿ ಸವಿತಾ ಬೆಡಗ ಬೆಳ್ಳೂರು, ಪ್ರಭಾಕರ ಅರಂಬೋಡಿ, ಚಂದ್ರಶೇಖರ ರಾವ್, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ ಉಪಸ್ಥಿತರಿದ್ದರು.
ಶ್ರೀಮತಿ ವೇದಾವತಿ ಪ್ರಾರ್ಥಿಸಿದರು. ನಿರ್ದೇಶಕ ಭರತ್ ನೆಕ್ರಾಜೆ ಸ್ವಾಗತಿಸಿದರು. ವ್ಯವಸ್ಥಾಪಕ ಡಾ.ರವಿರಾಜ್ ಉಡುಪ ವಂದಿಸಿದರು. ವಿಸ್ತರಣಾಧಿಕಾರಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ವಿಸ್ತರಣಾಧಿಕಾರಿಗಳು, ಪಶು ವೈದ್ಯರುಗಳು ಭಾಗವಹಿಸಿದರು. ಮಧ್ಯಾಹ್ನ ಆಗಮಿಸಿದ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.










