ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಅಮೃತಮಹೋತ್ಸವ ವರ್ಷ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಜು.೧೫ ರಂದು ಸೈಂಟ್ ಬ್ರಿಜಿಡ್ಸ್ ಅನುದಾನಿತ ಶಾಲೆ ಆವರಣದಲ್ಲಿ ನಡೆಯಿತು.









ಅಮೃತಮಹೋತ್ಸವ ವರ್ಷಚಾರಣೆ ಅಂಗವಾಗಿ ಶಾಲಾ ಅಮೃತಮಹೋತ್ಸವ ಲಾಂಭನವನ್ನು ಮುತ್ತು ಚಿಪ್ಪಿಯೊಳಗಿಂದ ಅಮೃತಮಹೋತ್ಸವ ಲೋಗೋವನ್ನು ಅನಾವರಣ ಮಾಡುವುದರ ಮೂಲಕ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳು, ಶಾಲೆ ಜೊತೆ ಕಾರ್ಯದರ್ಶಿ ಪಾ.ಅಲ್ವಿನ್ ಎಡ್ವರ್ಡ್ ಡಿಕುನ್ಹಾ ರವರು ಅಮೃತಮಹೋತ್ಸವ ವರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತ, ಸೈಂಟ್ ಬ್ರಿಜಿಡ್ಸ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ,ಸೈಂಟ್ ಬ್ರಿಜಿಡ್ಸ್ ಪೋಷಕ ಸಮಿತಿ ಉಪಾಧ್ಯಕ್ಷ ನವೀನ್ ಚಾತುಬಾಯಿ,ಸೈಂಟ್ ಜೊಸೆಫ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ, ವೇದಿಕೆಯಲ್ಲಿ ಉಪಸ್ಥಿತರಿದ್ದು ಅಮೃತಮಹೋತ್ಸವ ವರ್ಷ ಯಶಸ್ವಿಯಾಗಿ ನಡೆಯಲಿ ಶುಭ ಹಾರೈಸಿದರು.
ಸೈಂಟ್ ಬ್ರಿಜಿಡ್ಸ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಆ?ಯಂಟನಿ ಮೇರಿ ಅಮೃತಮಹೋತ್ಸವ ವರ್ಷಚಾರಣೆ ಕಾರ್ಯಕ್ರಮದ ವಿಚಾರವನ್ನು ತಿಳಿಸಿ ಸ್ವಾಗತಿಸಿದರು.
ಶಿಕ್ಷಕಿ ವಲ್ಸ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ಮಿತಾ ದನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅಮೃತಮಹೋತ್ಸವ ವರ್ಷ ಚಾಲನೆ ಅಂಗವಾಗಿ ಧ್ವಜಾರೋಹಣ ಮಾಡಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ಮತ್ತು ಅಮೃತಮಹೋತ್ಸವ ಚಾಲನೆ ಕುರಿತು ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು.
ವಿನೋದ್ ಲಸ್ರಾದೋ ಐವತ್ತು ಸಾವಿರ ದೇಣಿಗೆ
ಸುಳ್ಯದ ಉದ್ಯಮಿ ಸೈಂಟ್ ಬ್ರಿಜಿಡ್ಸ್ ಶಾಲೆಯ ಹಳೆ ವಿದ್ಯಾರ್ಥಿ ಲ.ವಿನೋದ್ ಲಸ್ರಾದೊ ಶಾಲಾ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಐವತ್ತು ಸಾವಿರ ದೇಣಿಗೆ ನೀಡಿದರು.










