ಯಥಾ ಸ್ಥಿತಿಗೆ ಸಾಹಿತಿ ಶಿಶಿಲ ಒಲವು
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರೆಂದು ಬದಲಾಯಿಬೇಕೆಂಬ ಕೂಗು ಕೆಲವರಿಂದ ಕೇಳಿ ಬಂದಿದೆ. ಇದು ತೀರಾ ವಿಷಾದನೀಯ ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ತುಳು ರಾಜ್ಯವನ್ನು ಬಾರಕೂರು ರಾಜ್ಯ ಮತ್ತು ಮಂಗಳೂರು ರಾಜ್ಯವೆಂದು ಆಡಳಿತದ ಸಬಲೀಕರಣಕ್ಕಾಗಿ ವಿಭಜಿಸಲಾಗಿತ್ತು. ಅದೇ ಅವಧಿಯಲ್ಲಿ ತುಳು ರಾಜ್ಯವು ಆಡಳಿತ ವ್ಯವಹಾರಗಳಿಗೆ ಕನ್ನಡವನ್ನು ಬಳಸುತ್ತಿದ್ದುದರಿಂದ ಪೋರ್ಚುಗೀಸರು ಈ ಪ್ರದೇಶವನ್ನು ಕನ್ನಡ ಎಂದು ಕರೆದರು. ಪೋರ್ಚುಗೀಸಿನಲ್ಲಿ ‘ಡ’ ವನ್ನು ‘ರ’ ಎಂದು I ಉಚ್ಚರಿಸಲಾಗುತ್ತದೆ. ಆದುದರಿಂದ ಇದು ಕೆನರಾವಾಯಿತು. ಅತೀ ಬಲಿಷ್ಠ ನೌಕಾ ಪಡೆಯನ್ನು ಹೊಂದಿದ್ದ ಹೈದರಾಲಿಯು ಪಶ್ಚಿಮ ಕರಾವಳಿಯನ್ನು ಕಿನಾರಾ ಎಂದು ಕರೆದ. ಅದು ಕೆನರಾವಾಯಿತು. ಜಿಲ್ಲೆಯ ಪ್ರಥಮ ಕಲೆಕ್ಟರ್ ಮನೋನ ಕಾಲಕ್ಕೆ ಇದು ಕೆನರಾ ಜಿಲ್ಲೆಯಾಯಿತು. ಆಗಿನ ಕೆನರಾ ಜಿಲ್ಲೆಯಲ್ಲಿ ಈಗಿನ ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದ್ದವು.









ಈಗ ದ.ಕ. ಜಿಲ್ಲೆ ಉಡುಪಿ ಮತ್ತು ಕಾಸರಗೋಡುಗಳನ್ನು ಕಳಕೊಂಡು ಚಿಕ್ಕದಾಗಿವೆ. ಇದನ್ನು ಮಂಗಳೂರು ಎಂದು ಕರೆದರೆ, ಜಿಲ್ಲಾ ರಾಜಧಾನಿಯಾದ ಮಂಗಳೂರು ನಗರ ನೆನಪಿಗೆ ಬರುತ್ತದೆ. ದ.ಕ. ಎಂದಾಗ ಯಕ್ಷಗಾನ, ಕಂಬಳ, ಭೂತ, ಕೋಲಗಳ ಸಮೃದ್ಧ ಸಂಸ್ಕೃತಿ ನೆನಪಾಗುತ್ತದೆ. ಮಂಗಳೂರು ಎಂಬುದು ಇಂದಿಗೂ ದ.ಕ.ಕ್ಕೆ ಪರ್ಯಾಯ ಪದವಾಗಲು ಸಾಧ್ಯವೇ ಇಲ್ಲ. ಇದನ್ನು ಮಂಗಳೂರು ಎಂದು ಕರೆದರೆ, ಜಿಲ್ಲಾ ರಾಜಧಾನಿಯಾದ ಮಂಗಳೂರು ನಗರ ನೆನಪಿಗೆ ಬರುತ್ತದೆ. ದ.ಕ. ಎಂದಾಗ ಯಕ್ಷಗಾನ, ಕಂಬಳ, ಭೂತ, ಕೋಲಗಳ ಸಮೃದ್ಧ ಸಂಸ್ಕೃತಿ ನೆನಪಾಗುತ್ತದೆ. ಮಂಗಳೂರು ಎಂಬುದು ಇಂದಿಗೂ ದ.ಕ.ಕ್ಕೆ ಪರ್ಯಾಯ ಪದವಾಗಲು ಸಾಧ್ಯವೇ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಪಶ್ಚಿಮ ಘಟ್ಟಪ್ರದೇಶದಲ್ಲಿ 35 ಯೋಜನೆಗಳು ಅನುಷ್ಠಾನಗೊಳ್ಳಲು ಕಾದು ಕುಳಿತಿವೆ. ಆಗ ಭೀಕರ ಪರಿಸರ ಅಸಮತೋಲನ ಉಂಟಾಗಲಿದೆ. ಮಳೆ ಬಂದಾಗ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕೃತಕ ನೆರೆ ಉಂಟಾಗುತ್ತಿದೆ. ಕೋಮು ದ್ವೇಷದಿಂದಾಗಿ ಕೊಲೆಗಳು ಸಂಭವಿಸುತ್ತವೆ. ಆರಾಧನಾ ಕೇಂದ್ರಗಳಲ್ಲಿ ಪಂಕ್ತಿಭೇದ ಮಾಡಲಾಗುತ್ತದೆ. ದ.ಕ. ಜಿಲ್ಲೆಯ ಆತ್ಮದಂತಿರುವ ಯಕ್ಷಗಾನಕ್ಕೆ ಒಂದು ನೆಲೆಗಟ್ಟು ಒದಗಿಸಿ ಅವನ್ನು ರಾಜ್ಯಕಲೆಯಾಗಿಸಲು ನಮ್ಮ ಶಾಸಕರಿಂದಾಗಲೀ, ಸಂಸದರಿಂದಾಗಲೀ, ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಗೊಂದಲಗಳ ಮಧ್ಯೆ ಜಿಲ್ಲೆಯ ಹೆಸರನ್ನು ಅನಗತ್ಯವಾಗಿ ಬದಲಿಸುವ ಗೊಂದಲ ಬೇಡವೇ ಬೇಡ ಎಂದು ಡಾ. ಶಿಶಿಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.










