ಸುಳ್ಯ ನಗರ ಪಂಚಾಯತ್ ನಿಂದ ಇತ್ತೀಚೆಗೆ ಬಾಗಲಕೋಟೆ ಗೆ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಸುಧಾಕರ್ ರವರಿಗೆ ಬೀಳ್ಕೋಡುಗೆ ಸಮಾರಂಭವು ಜು.15 ರಂದು ನಗರ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನಿರಬಿದರೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ನಗರ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು,ನಗರ ಪಂಚಾಯತ್ ಸಿಬ್ಬಂದಿಗಳು, ಪೌರಕಾರ್ಮಿಕರು,ಸುಳ್ಯ ಯೋಜನಾ ಪ್ರಾಧಿಕಾರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.








ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿ ಬಾಗಲಕೋಟೆಗೆ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಸುಧಾಕರ್ ರವರು ಬಹಳ ಒಳ್ಳೆಯ ತಾಳ್ಮೇಯ ಮನುಷ್ಯ ಸುಳಕ್ಕೆ ಸೂಡ ಬರವಲ್ಲಿ ಬಹಳ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ ಎಂದು ಸುಳ್ಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫಾ ರವರು ಶುಭ ಹಾರೈಸಿದರು.

ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದನಾಯ್ಕ,ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,
ರವರು ಅಭಿನಂದನಾ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ರವರು ಶುಭ ಹಾರೈಸಿದರು.
ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಬಾಲಕೃಷ್ಣ ರೈ,ಸುಧಾಕರ,ಡೇವಿಡ್ ದೀರಾ ಕ್ರಾಸ್ತ,ಶಿಲ್ಪಾ ಸುದೇವ್,ಸುಶೀಲಾ ಜಿನ್ನಪ್ಪ,ನಾರಯಣ ಶಾಂತಿನಗರ,ಶಿಲಾ ಕುರುಂಜಿ,ಪೂಜಿತಾ ಶಿವಪ್ರಸಾದ್,ಬಾಸ್ಕರ ಪೂಜಾರಿ,ರಾಜುಪಂಡಿತ್,ನಗರ ಪಂಚಾಯತ್ ಸಿಬ್ಬಂದಿವರ್ಗದವರು,ಹಾಗೂ ಪೌರ ಕಾರ್ಮಿಕರು ಮೊದಲಾದವರು
ಉಪಸ್ಥಿತರಿದ್ದರು.
ನಗರ ಉದ್ಯೋಗಿಗಳಾದ ಶಶಿಕಲಾ ಮಯ್ಯ,ಸುನಿತಾ,ದಿಲೀಪ್ ರವರು ಕಾರ್ಯಕ್ರಮ ನಿರೂಪಿಸಿದರು.
ಜಯಲಕ್ಷ್ಮಿ ಯವರು ದನ್ಯವಾದ ಸಮರ್ಪಣೆ ಮಾಡಿದರು.










