ಎಡಮಂಗಲ ಸ. ಹಿ. ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ (ದ್ವಿ ಭಾಷಾ )ತರಗತಿ ಪ್ರಾರಂಭೋತ್ಸವ ಮತ್ತು ಉದ್ಘಾಟನೆ

0

ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದ ಆದೇಶದಂತೆ ಆಂಗ್ಲ ಮಾಧ್ಯಮ (ದ್ವಿ ಭಾಷಾ) ತರಗತಿಯ ಪ್ರಾರಂಭೋತ್ಸವ ಮತ್ತು ಉದ್ಘಾಟನಾ ಸಮಾರಂಭವು ಜು.18 ರಂದು ನಡೆಯಿತು.

ಉದ್ಘಾಟನೆಯನ್ನು ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ನೆರವೇರಿಸಿದರು. ದೀಪ ಪ್ರಜ್ವಲನೆಯನ್ನು ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ನೆರವೇರಿಸಿದರು. ಅತಿಥಿಗಳಾಗಿ ಶಾಲಾ ಏಸ್.ಡಿ.ಎಮ್.ಸಿ ಅಧ್ಯಕ್ಷ ಭಾಸ್ಕರ್ ಆಚಾರ್ಯ, ಪಂಜ-ಎಣ್ಮೂರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ಕೆ, ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾ ನಾಮ ನಿರ್ದೇಶಿತ ಸದಸ್ಯರಾದ ಶ್ರೀಮತಿ ವನಿತಾ ಕಾಯ್ತಿಮಾರು, ಎಡಮಂಗಲ ಸರ್ಕಾರಿ ಪ್ರೌಢಶಾಲೆ ಎಡಮಂಗಲ ಮುಖ್ಯ ಗುರುಗಳಾದ ಅಬ್ದುಲ್ ಖಾದರ್, ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಪವಿತ್ರ ನಡುಬೈಲ್ ಉಪಸ್ಥಿತರಿದ್ದರು. ಶಾಲಾ ಗೌರವ ಶಿಕ್ಷಕಿ ಶ್ರೀಮತಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಗುರುಗಳಾದ ಶ್ರೀಮತಿ ಪಾರ್ವತಿ ಬಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಶ್ರೀಮತಿ ರಮ್ಯಾ ವಂದಿಸಿದರು. ಶಾಲಾ ಹಿರಿಯ ಶಿಕ್ಷಕರಾದ ಶ್ರೀಮತಿ ಹಂಸಾವತಿ, ಸಹ ಶಿಕ್ಷಕರಾದ ಪಲ್ಲವಿ, ಗಾಯತ್ರಿ ಹಾಗೂ ಗೌರವ ಶಿಕ್ಷಕರಾದ ಮೋಹಿನಿ, ರಮ್ಯಾ ಪಿ ಹಾಗೂ ಅಡುಗೆ ಸಿಬ್ಬಂದಿಗಳು,ಪೋಷಕ ವೃಂದ,ಹಿರಿಯ ವಿದ್ಯಾರ್ಥಿ ಸಂಘ, ಊರ ದಾನಿಗಳು ಹಾಗೂ ಊರಿನ ಹಿರಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.