ಡಾ.ನಂದಕುಮಾರ್ ಪುತ್ರ ಆಸ್ತಿಕ್ ಕೇರಳದಲ್ಲಿ ಕೆರೆನೀರಲ್ಲಿ ಮುಳುಗಲ್ಪಟ್ಟು ಮೃತ್ಯು

0

ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ರವರ ಪುತ್ರ , ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಇಂದು ಕೇರಳದ ಕಣ್ಣೂರಿನಲ್ಲಿ ಕೆರೆಯೊಂದರ ನೀರಲ್ಲಿ ಮುಳುಗಲ್ಪಟ್ಟು ಮೃತ್ಯು ವಶವಾಗಿರುವುದಾಗಿ ತಿಳಿದುಬಂದಿದೆ.

ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಆತನ ಮನೆಗೆ ಆಸ್ತಿಕ್ ಇಂದು ಬೆಳಿಗ್ಗೆ ಹೋಗಿದ್ದರೆನ್ನಲಾಗಿದೆ.

ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಲ್ಲಿ ಮುಳುಗಲ್ಪಟ್ಟು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.


ಡಾ.ನಂದ ಕುಮಾರ್ ರವರು ತನ್ನ ಮನೆಯವರು ಮತ್ತು ಡಾ.ಎಂ.ಪಿ.ಸುಬ್ರಹ್ಮಣ್ಯ ಮತ್ತಿತರರೊಂದಿಗೆ ಈಗ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಅವರು ಅಲ್ಲಿಗೆ ತಲುಪಿದ ಬಳಿಕ ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ.