ಲಾರಿ ಜಖಂ, ಚಾಲಕ ಅಪಾಯದಿಂದ ಪಾರು
ಕಲ್ಲುಗುಂಡಿಯ ಕಡಪ್ಪಾಲ ಬಳಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಟಾಟಾ ಇಂಟ್ರ ಗೂಡ್ಸ್ ಲಾರಿ ಪಲ್ಟಿಯಾಗಿದ್ದು ವಾಹನ ಜಖಂ ಗೊಂಡು ಚಾಲಕ ಸೇರಿ ಸಹ ಪ್ರಯಾಣಿಕ ಯಾವುದೇ ಅಪಾಯ ವಿಲ್ಲದೆ ಪಾರಾದ ಘಟನೆ ಆ ೧ ರಂದು ಸಂಜೆ ನಡೆದಿದೆ.















ಮಡಿಕೇರಿ ಕಡೆಯಿಂದ ಬರುತಿದ್ದ ಲಾರಿಯನ್ನು ಹಿಂದಿನಿಂದ ಬಂದ ಕಾರೊಂದು ಓವರ್‌ಟೇಕ್ ಮಾಡಲು ಹೋಗಿದ್ದು ಇದನ್ನು ನೋಡಿದ ಲಾರಿ ಚಾಲಕ ಸೈಡ್ ಕೊಡಲು ಹೋಗಿ ನಿಯಂತ್ರಣ ತಪ್ಪಿ ಲಾರಿ ಚರಂಡಿಗೆ ಪಲ್ಟಿಯಾಗಿದೆ ಎನ್ನಲಾಗಿದೆ.
ಲಾರಿ ಬಹುತೇಕ ಹಾನಿಯಾಗಿದ್ದು ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಕಾರು ಚಾಲಕ ನಿಲ್ಲಿಸದೆ ಹೋಗಿದ್ದು ಹಿಂದಿನಿಂದ ಬಂದ ಮತ್ತೊಂದು ಲಾರಿ ಚಾಲಕ ನಿಲ್ಲಿಸಿ ಸಹಾಯ ಮಾಡಿದರು ಎಂದು ತಿಳಿದು ಬಂದಿದೆ.










