ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆ

0

ಬೆಳ್ಳಾರೆಯ ಐತಿಹಾಸಿಕ ಸ್ಥಳವಾದ ಬಂಗ್ಲೆಗುಡ್ಡೆಯಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವ ಆಚರಣೆ ಮಾಡುವ ಬಗ್ಗೆ ಪೂರ್ವಭಾವಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈಯವರ ಅಧ್ಯಕ್ಷತೆಯಲ್ಲಿ ಆ.08 ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಅಮರ ಸುಳ್ಯ ಸಮರ ಸಮಿತಿಯ ತಾಲೂಕು ಅಧ್ಯಕ್ಷ ಚಂದ್ರಕೋಲ್ಚಾರ್, ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು,ಗ್ರಾ.ಪಂ.ಉಪಾಧ್ಯಕ್ಷೆ ವೀಣಾ ಮೂಡಾಯೊತೋಟ,ನಿವೃತ್ತ ಉಪವಲಯಾರಣ್ಯಾಧಿಕಾರಿ ತಿಮ್ಮಪ್ಪ ಗೌಡ,ಕೂಸಪ್ಪ ಗೌಡ ಮುಗುಪ್ಪು,ಜಯರಾಮ ಗೌಡ,ಗ್ರಾ.ಪಂ.ಸದಸ್ಯ ಚಂದ್ರಶೇಖರ ಪನ್ನೆ,ಸಹಕಾರಿ ಸಂಘದ ನಿರ್ದೇಶಕರು,ಗ್ರಾ.ಪಂ.ಸದಸ್ಯರು,ಸಂಜೀವಿನಿ ಘಟಕದ ಎಂ.ಬಿ.ಕೆ,ಎಲ್.ಸಿ.ಆರ್.ಪಿ ಗಳು ,ಶಾಲಾ ಶಿಕ್ಷಕರು,ಪೊಲೀಸ್ ಇಲಾಖೆಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.