ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ. ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಇವರ ಸಹಕಾರದೊಂದಿಗೆ ಸಾರ್ವಜನಿಕ ”ಶ್ರೀ ವರಮಹಾಲಕ್ಷ್ಮೀ ‘ ಪೂಜಾ ಕಾರ್ಯಕ್ರಮವು ಆ. 8ರಂದು “ಶ್ರೀ ವಿನಾಯಕ” ಸಭಾಭವನ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳ ದಲ್ಲಿ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ
ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆ ಡಾ| ವೀಣಾ .ಸ್ತ್ರಿ ರೋಗ ತಜ್ಞರು ನೆರವೇರಿಸಿ ” ಶ್ರೀ ವರಮಹಾಲಕ್ಷ್ಮೀ ಪೂಜೆಯ ಬಗ್ಗೆ ಉಲ್ಲೇಕಿಸುತ್ತಾ ಸಮಸ್ತ ಸಂಕುಲಕ್ಕೆ ಒಳಿತಾಗುವ ರೀತಿಯಲ್ಲಿ ಪೂಜೆ ನಡೆಯಬೇಕು ಎಂದು ಪಾರ್ವತಿಯು ಶಿವನಲ್ಲಿ ಬೇಡಿಕೊಂಡಾಗ ಈ ಪೂಜೆಯು ಹುಟ್ಟಿಕೊಂಡಿತು ಎಂದು ಪ್ರತೀತಿ.
”ಲಕ್ಷ್ಮೀ ” ಎಂದರೆ ಎಲ್ಲವೂ ಅವಳು ಸಮುದ್ರ ಮಥನದ ಕಾಲದಲ್ಲಿ ಉದ್ಭವಿಸಿದಳು. ಪ್ರಾಮಾಣಿಕ ದುಡಿಮೆಯ ದುಡ್ದೇ ನಮಗೆ ಸಹಕಾರ.ಕಠಿಣ ಶ್ರಮದ ಒಡತಿಯವಳು, ದೇಹ ದಂಡಿಸಿ ದುಡಿದಾಗ ಧಾನ್ಯಲಕ್ಷ್ಮಿ. ಹೀಗೆ ಲಕ್ಷ್ಮಿಯು ನಮಗೆ ಅಷ್ಟ ಲಕ್ಷ್ಮಿಯಾಗಿ ಬಂದು ಕೃಪೆ ತೋರುತ್ತಾಳೆ. ದ್ರವ್ಯ ಮತ್ತು ಮಾನಸಿಕ ಪೂಜೆಯೆಂದು ಎರಡು ವಿಧ. ಕಷ್ಟಪಟ್ಟು ದುಡಿದಾಗ ಲಕ್ಷ್ಮಿ ಮನೆ ಬರುತ್ತಾಳೆ. ಸಾತ್ವಿಕ . ‘ರಾಜಸಿಕ .ತಾಮಸಿಕ. ಎಂಬ 3 ವಿಧಧ ದಾನಗಳು. ಉಡಾಫೆಯ ಮಾತು ಎಂದಿಗೂ ” ಲಕ್ಷ್ಮಿ”ಗೆ ಸಲ್ಲ ಎಂದು ಉದ್ಘಾಟನಾ ನೆಲೆಯಿಂದ ಮಾತನಾಡಿ ಶುಭ ಹಾರೈಸಿದರು..
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಮಾಧವ ಗೌಡರವರು ಮಾತನಾಡಿ
ಕಲಿಯುಗದಲ್ಲಿ ದೇವರನ್ನು ಕಾಣುವ ಪ್ರಕ್ರಿಯೆಯೇ ಇಂದು ನಡೆದ ಪೂಜೆ. ಸ್ವಚ್ಚವಾಗಿ. ಶುದ್ಧವಾಗಿ. ಸರಳವಾಗಿ . ಯಾವ ರೀತಿಯಿಂದಲೂ ಎಲ್ಲಿ ಬೇಕಾದರೂ ಪೂಜೆ ಮಾಡಬಹುದು. ನಾವು ಸೋತಾಗಲೂ ನಮ್ಮನ್ನು ರಕ್ಷಿಸುವುದು ಪ್ರಕೃತಿಯ ಆರಾಧನೆ. ಹೆಣ್ಣು ಸೇರುವ ಮನೆ ನಂದಾದೀಪವಾದರೆ
ಅವಳು ಹುಟ್ಟಿದ ಮನೆಯೂ ನಂದಾದೀಪವಾಗುತ್ತದೆ. ಪ್ರತಿಯೊಂದು ವಿಭಾಗದಲ್ಲೂ ಹೆಣ್ಣಿಗೆ ವಿಶೇಷವಾದ ಗೌರವವಿದೆ. ನಾನು ಮಾಡುವ ಪ್ರತಿಯೊಂದು ಕೆಲಸಗಳಿಗೂ ನಿನ್ನ ಅನುಗ್ರಹವಿರಲಿ ದೇವರೇ, ನಮ್ಮ ಮನೆಯ ದೇವರನ್ನು ಭಜಿಸದೇ ಇದ್ದು ಬೇರೆ ದೇವರನ್ನು ಭಜಿಸಿ ಫಲವೇನು ?
ಯಾವುದೇ ವ್ಯಕ್ತಿ ಏನೇ ಮಾಡುವುದಿದ್ದರೂ ಆತನಿಗೆ ಆರೋಗ್ಯವೇ ಸಂಪತ್ತು. ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವುದೇ ಸಹಾಯ. ದೇವಾಲಯ, ವಿಧ್ಯಾಲಯ. ಚಿಕಿತ್ಸಾಲಯ – ಈ 3 ಆಲಯಗಳು ಸರಿ ಇದ್ದರೆ ಎಲ್ಲವೂ ಸರಿ ಇದ್ದಂತೆ . ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ತಿಳಿಹೇಳಬೇಕು. ಭಕ್ತರಿಂದ ಬಂದ ಹಣ ಪುನಃ ಭಕ್ತನ ಒಳಿತಿಗೆ ವಿನಿಯೋಗಿಸುವುದು ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ. ನಮ್ಮೇಲ್ಲರ ಸಂಸಾರಕ್ಕೆ ಒಳ್ಳೆಯ ಸಂಸ್ಕಾರ ದೊರೆಯಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಹರೀಶ್ ಕಂಜಿಪಿಲಿ.
ಅಧ್ಯಕ್ಷರು. ಜೀರ್ಣೊದ್ದಾರ ಸಮಿತಿ ಶ್ರೀಕ್ಷೇತ್ರ ರೆಂಜಾಳ: ಹಾಗೂ
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಿನುಂಗೂರು.
ಸುಮಾರು 15 ವರುಷಗಳಿಂದ ನಿರಂತರವಾಗಿ ಈ ಪೂಜೆಯನ್ನು ನಡೆಸಿಕೊಂಡು ಬರುತ್ತಿರುವ ನಿಮಗೆಲ್ಲರಿಗೂ ಅಭಿನಂದನೆಗಳು, ಮೂಡನಂಬಿಕೆಗೆ ಪ್ರಾಶಸ್ಯ ಕೊಡದೇ ಮೂಲ ನಂಬಿಕೆಗೆ ಪ್ರಾಶಸ್ಯ ಕೊಡಬೇಕು. ಎಲ್ಲರಿಗೂ ಎಲ್ಲರಲ್ಲಿಯೂ ಗೌರವ ನೀಡುವಂತಿರಬೇಕು ಎಂದರು.









ಸುಳ್ಯ ತಾಲೂಕು
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ನ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ಮಾತನಾಡಿ ಸಂಪಾಜೆ ವಲಯಕ್ಕೆ ಶ್ರೀಕ್ಷೇತ್ರದಿಂದ ಸುಮಾರು ನಾಲ್ಕುವರೆ ಕೋಟಿ ಅನುದಾನ ಲಭಿಸದೆ,
ಒಂದು ಕಾಲದಲ್ಲಿ ಪ್ರತೀ ಮನೆಯಲ್ಲಿಯೂ ನಿತ್ಯ ಭಜನೆ ನಡೆಯುತಿತ್ತು. ಎಂದು ಹೇಳಿ ಶುಭ ಹಾರೈಸಿದರು.
ಜಗನ್ನಾಥ ಕಾಯರ ‘. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾತನಾಡಿ ಸಮಾಜದಲ್ಲಿ ಇಂದು ಮಹಿಳೆಯರು ಕೂಡಾ ಮುಂದೆ ಬರುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ. ಹಿಂದೂ ಸಮಾಜವೆಂಬುದು ಸಾಗರವಿದ್ದಂತೆ ಎಂದು ಶುಭಕೋರಿದರು.
ಇದೇ ಸಂದರ್ಭದಲ್ಲಿ “ಡಾ| ವೀಣಾ ರವರಿಗೆ ಬಾಗಿನ ಅರ್ಪಿಸಲಾಯಿತು.
“ಶ್ರೀ ವರಮಹಾಲಕ್ಷ್ಮಿ ಪೂಜೆಯ ಅಧ್ಯಕ್ಷರಾದ ರಾಜೇಶ್ವರಿ ಕುಮಾರಸ್ವಾಮಿಯವರು ಅಧ್ಯಕ್ಷತೆ ನೆಲೆಯಿಂದ ಮಾತನಾಡಿ ಅಷ್ಟಲಕ್ಷ್ಮಿಯರ ಆರಾಧನೆಯೊಂದಿಗೆ ನಾವು ಇಂದು ವರಲಕ್ಷ್ಮೀ ಪೂಜೆಯನ್ನು ಮಾಡಿರುತ್ತೇವೆ. ದಿನವೂ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಿರಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಪುಟ್ಟಣ್ಣಗೌಡ ಬಾಣೂರು, ಗೌರವ ಅಧ್ಯಕ್ಷರು. ವರಮಹಾಲಕ್ಷ್ಮಿ ಪೂಜಾ ಸಮಿತಿ – ಮರ್ಕಂಜ, ಗೀತಾ ಹೊಸೋಳಿಕೆ ಅಧ್ಯಕ್ಷರು ಗ್ರಾಮ ಪಂಚಾಯತ್ ಮರ್ಕಂಜ, ಸತೀಶ್ ರಾವ್ ದಾಸರಬೈಲು ಅಧ್ಯಕ್ಷರು, ಜನಜಾಗೃತಿ ಗ್ರಾಮಸಮಿತಿ ಮರ್ಕಂಜ ಚಿನ್ನಪ್ಪ ಗೌಡ ಬೇರಿಕೆ
ಸಂಚಾಲಕರು, ಅನ್ನಪೂರ್ಣ ಸಮಿತಿ ಶ್ರೀಕ್ಷೇತ್ರ ರೆಂಜಾಳ, ಜಗನ್ಮೋಹನ ರೈ ರೆಂಜಾಳ,
ಸಂಪಾಜೆವಲಯ ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷರು, ಸರಸ್ಪತಿ ಕಕ್ಕಾಡು, ನಿಕಟಪೂರ್ವ ಅಧ್ಯಕರು, ವರಮಹಾಲಕ್ಷ್ಮೀ ಪೂಜಾಸಮಿತಿ, ಮರ್ಕಂಜ, ಗೋಪಾಲಕೃಷ್ಣ ಗೌಡ ಬಳ್ಕಾಡಿ.
ರಾಧಾಕೃಷ್ಣ ಗೌಡ ಅಂಗಡಿಮಜಲು, ಲೀಲಾವತಿ ಸೂಟೆಗದ್ದೆ, ಹೂವಯ್ಯ ಗೌಡ
ಪದ್ಮನಾಭ ಶೆಟ್ಟಿ ಮರ್ಕಂಜ, ರಾಘವ ಗೌಡ ಕಂಜಿಪಿಲಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಲಕ್ಷೀ ಪಾವನ ಜ್ಞಾನ ವಿಕಾಸದ ಸದಸ್ಯರು ಪ್ರಾರ್ಥನೆ ನೆರವೇರಿಸಿದರು.
ಹರೀಶ್ ಆಚಾರ್ಯ. ಮೇಲ್ವಿಚಾರಕರು, ಸಂಪಾಜೆ ವಲಯ. ಸ್ವಾಗತಿಸಿದರು.
ರೋಹಿಣಿ ಅಂಗಡಿಮಜಲು ವಂದಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ನಿತ್ಯಾನಂದ ಭೀಮಗುಳಿ ಯವರು ನೆರವೇರಿಸಿದರು.
ಪ್ರಸಾದ ವಿತರಣೆಯ ನಂತರ ಸೇರಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.










