








ಇತ್ತೀಚೆಗೆ ನಿಧನರಾದ ನೆಲ್ಲೂರು ಕೆಮ್ರಾಜೆ ಗ್ರಾಮದ ಯಕ್ಷಗಾನ ಕಲಾವಿದ ಮಹೇಶ್ ಮಣಿಯಾಣಿ, ನಿವೃತ್ತ ಯೋಧ ಉಮೇಶ್ ಮಣಿಯಾಣಿಯವರ ತಾಯಿ ಶ್ರೀಮತಿ ನೀಲಮ್ಮ ಇಂತಿಕಲ್ಲುರವರ ಶ್ರದ್ದಾಂಜಲಿ ಸಭೆಯು ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು. ಪುತ್ತೂರು ತಾಲೂಕು ಕುರುಂಜ ನಿವೃತ್ತ ಮುಖ್ಯಗುರು ವಾಸು ಮಣಿಯಾಣಿಯವರು ಮೃತರ ಭಾವಚಿತ್ರಕ್ಕೆ ಪುಷ್ಪನಮನಗೈದು, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಮನೆಯವರು, ಕುಟುಂಬಸ್ಥರು, ಬಂಧುಗಳು ಹಾಗೂ ಊವರು ಉಪಸ್ಥಿತರಿದ್ದರು.











