ನಾಳೆ ಬೊಮ್ಮಾರಿನಲ್ಲಿ ಅಯ್ಯಪ್ಪ ದೀಪೋತ್ಸವ

0

ಭಜನಾ ಕಾರ್ಯಕ್ರಮ, ಪಾಲ್ಕೊಂಬು ಮೆರವಣಿಗೆ, ಸಭಾ ಕಾರ್ಯಕ್ರಮ, ಅಯ್ಯಪ್ಪ ಭಕ್ತರಿಂದ ಅಗ್ನಿಸೇವೆ

ರಾತ್ರಿ ಭಸ್ಮಾಸುರ ಮೋಹಿನಿ ಹಾಗೂ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ

ಮರ್ಕಂಜದ ಮೊಮ್ಮಾರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಇದರ ವತಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಕಾರ್ಯಕ್ರಮವು ಬೊಮ್ಮಾರು ಶ್ರೀ ಮೂವರ್ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ದಿನೇಶ್ ಬೊಮ್ಮರು ರವರು ಗುರುಸ್ವಾಮಿ ಭಕ್ತನಾಗಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ 18 ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ವಿಶೇಷವಾಗಿ ಅಯ್ಯಪ್ಪ ದೀಪೋತ್ಸವವು ಜನಾರ್ಧನ ಗುರುಸ್ವಾಮಿ ಕಾಪಿಲ ಕಲ್ಲುಗುಂಡಿ ಇವರ ನೇತೃತ್ವದಲ್ಲಿ ನಡೆಯಲಿದ್ದು, ಬೆಳಿಗ್ಗೆ ಗಣಹೋಮ ದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಅನ್ನದಾನ ನಡೆಯಲಿದೆ. ಸಂಜೆ ರೆಂಜಾಳ ದೇವಸ್ಥಾನದಿಂದ ಬೊಮ್ಮಾರು ವರೆಗೆ ಪಾಲ್ಕೊಂಬು ಮೆರವಣಿಗೆ ನಡೆಯಲಿದೆ.


ರಾತ್ರಿ 7ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9.30ಕ್ಕೆ ಅಗ್ನಿ ಸ್ಪರ್ಶ, ರಾತ್ರಿ 10ರಿಂದ ದೀಪಾರಾಧನೆ, ಭಸ್ಮಾಸುರ ಮೋಹಿನಿ ಹಾಗೂ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ, ರಾತ್ರಿ 12.30ಕ್ಕೆ ಅಪ್ಪಸೇವೆ, ಪ್ರಾಥಕಾಲ 4 ಗಂಟೆಗೆ ಅಯ್ಯಪ್ಪ ಭಕ್ತರಿಂದ ಅಗ್ನಿಸೇವೆ, ಬೆಳಿಗ್ಗೆ 5ಕ್ಕೆ ಗುರುಪಾದ ವಂದನ ಮತ್ತು ಪೂಜಾ ಕಾರ್ಯಕ್ರಮ, ಬೆಳಿಗ್ಗೆ 5.30ಕ್ಕೆ ಅಯ್ಯಪ್ಪ ಸ್ವಾಮಿಯ ಪ್ರಸಾದ ವಿತರಣೆ ನಡೆಯಲಿದೆ.