ಧರ್ಮಸ್ಥಳ ಯೋಜನೆಯಿಂದ ಅನಾರೋಗ್ಯ ಪೀಡಿತೆ ರೇವತಿಗೆ ವೀಲ್ ಚೇರ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಜಾಲ್ಸೂರು ವಲಯದ ಪೈಲಾರು ಕಾರ್ಯಕ್ಷೇತ್ರದ ಕುಕ್ಕುಜಡ್ಕ ಒಕ್ಕೂಟದ ಅನ್ನಪೂರ್ಣ ಸಂಘದ ಸದಸ್ಯರ ಮನೆಯವರಾದ ರೇವತಿ ಅವರು ಹತ್ತು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಅವರಿಗೆ ನಡೆದಾಡಲು ಸಾಧ್ಯವಾಗದಿರುವುದರಿಂದ ಧರ್ಮಸ್ಥಳ ಯೋಜನೆಯಿಂದ ವೀಲ್ ಚೇರ್ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮಹಾ ವಿಷ್ಣು ಭಜನ ಮಂಡಳಿಯ ಗೌರವ ಸಲಹೆಗಾರರಾದ ಕೃಷ್ಣ ಭಟ್ ಹಸ್ತಾಂತರಿಸಿದರು. ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಇತರರಿದ್ದರು.