ಆ.15 ರಿಂದ 18 : 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಧಾರ್ಮಿಕ ವಿವಿಧ ಕಾರ್ಯಕ್ರಮಗಳು
ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.ಆ.15ರಿಂದ ಪ್ರಾರಂಭಗೊಂಡು 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಆ.15 ರಂದು ಬೆಳಿಗ್ಗೆ ದೀಪ ಪ್ರಜ್ವಲನೆ, ಪ್ರಾರ್ಥನೆ, ಸ್ಥಳೀಯ ಭಜನಾ ತಂಡಗಳಿಂದ ಭಜನೆ, ಭಜನಾ ಮಂಗಲಂ, ದೀಪ ವಿಸರ್ಜನೆ, ಸ್ವಸ್ತಿ ಪುಣ್ಯಾಹ, ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಸುದರ್ಶನ ಹವನ, ಬಾಧಾಕರ್ಷಣೆ, ಪ್ರೇತೋಚ್ಛಾಟನೆ ವಗೈರೆ ನಡೆಯಲಿದೆ.
ಆ.16ರಂಇದು ಶ್ರೀ ಮಹಾಗಣಪತಿ ಹವನ, ಮೋಕ್ಷನಾರಾಯಣ ಬಲಿ, ತಿಲಾಶಾನ್ತಿ, ವೇದ ಪಾರಾಯಣ, ಭಗವದ್ಗೀತಾ ಪಾರಾಯಣ, ವಿಷ್ಣು ಸಹಸ್ರನಾಮ, ಪಾರಾಯಣ, ಬ್ರಾಹ್ಮಣ ಆರಾಧನೆ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಭೋಜನ ಪ್ರಸಾದ ನಡೆಯಲಿದೆ. ಆ.17 ರಂದು ಶ್ರೀ ತೀರ್ಥಕ್ಷೇತ್ರ ಸಂದರ್ಶನ, ಸಂಗಮ ಕ್ಷೇತ್ರದಲ್ಲಿ ಪಿಂಡ ವಗೈರೆ ನಡೆಯಲಿದೆ.















ಆ.18 ರಂದು ನೂತನ ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ಬ್ರಹ್ಮಶ್ರೀ ವೇ.ಮೂ. ಪುರೋಹಿತ ನಾಗರಾಜ ಭಟ್ರವರ ನೇತೃತ್ವದಲ್ಲಿ ಶಿಲಾನ್ಯಾಸ ಭೂಮಿ ಪೂಜನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಿರ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ಲು ವಹಿಸಲಿರುವರು. ಉದ್ಯಮಿ ಹಾಗೂ ಪ್ರಾ,ಕೃ.ಪ.ಸ.ಸಂ.ನಿ.ಜಾಲ್ಸೂರು ಇದರ ಅಧ್ಯಕ್ಷ ಸುಧಾಕರ ಕಾಮತ್ ಶಿಲಾನ್ಯಾಸ ನೆರವೇರಿಸುವರು, ಮುಖ್ಯ ಅಭ್ಯಾಗತರಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ಹರಿಪ್ರಕಾಶ್ ಅಡ್ಕಾರ್ , ಮಂದಿರದ ಗೌರವಾಧ್ಯಕ್ಷ ರುಕ್ಮಯ್ಯ ಗೌಡ ಎಸ್ ಎನ್ ನಡುಮನೆ, ಶ್ರೀ ಕಿನ್ನಿಮಾಣಿ ಪೂಮಾಣಿ ಉಳ್ಳಾಕುಲು ದೈವಸ್ಥಾನ ಕುಕ್ಕನೂರು ಇದರ ಮೊಕ್ತೇಸರಾದ ಬಾಲಕೃಷ್ಣ ಗೌಡ ಎನ್, ಶ್ರೀ ವಿಷ್ಣುಮೂರ್ತಿ ವಯನಾಟ್ಕುಲವನ್ ದೈವಸ್ಥಾನ ಸೋಣಂಗೇರಿ ಇದರ ಗೌರವಾಧ್ಯಕ್ಷ ಮನ್ಮಥ ಎಸ್.ಎನ್, ಅಯ್ಯಪ್ಪ ದೇವಸ್ಥಾನದ ವಿದ್ಯಾಗಿರಿ ಸೋಣಂಗೇರಿ ಇದರ ಗುರುಸ್ವಾಮಿ ನಾಗರಾಜ, ಬಾಲಮುರುಗನ್ ದೇವಸ್ಥಾನ ಕುಕ್ಕನೂರು ಇದರ ಅಧ್ಯಕ್ಷ ದೇವೇಂದ್ರ ಕುಕ್ಕನ್ನೂರು, ಮುತ್ತುಮಾರಿಯಮ್ಮ ದೇವಸ್ಥಾನ ವಿದ್ಯಾಗಿರಿ ಸೋಣಂಗೇರಿ ಇದರ ಅಧ್ಯಕ್ಷ ಮಹೇಶ್ವರನ್ ಸೋಣಂಗೇರಿ ಉಪಸ್ಥಿತರಿರುವರು.
ಗೌರವ ಉಪಸ್ಥಿತಿಯಲ್ಲಿ ಜಾಲ್ಸೂರು ಗ್ರಾ,ಪಂ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಸದಸ್ಯರಾದ ಶಿವಪ್ರಸಾದ್ ನೀರಬಸಿರಿ, ದೀಪ ಅಜಕಲಮೂಲೆ, ಈಶ್ವರ ನಾಯ್ಕ ಸೋಣಂಗೇರಿ ಅಂಬಿಕಾ ಕುಕ್ಕನೂರು, ಸ್ಥಳೀಯರಾದ ರವೀಂದ್ರನಾಥ್ ಎಸ್ಎನ್, ನೋಟರಿ ವಕೀಲ ದೇವಿಪ್ರಸಾದ್ ಆಳ್ವ, ನಿವೃತ್ತ ಅಭಿವೃದ್ಧಿ ಅಧಿಕಾರಿ ಧನಜಂಯ ಕುಕ್ಕನೂರು, ನಿವೃದ್ಧ ಯೋಧ ಬಾಲಚಂದ್ರ ಕೆಳಗಿನಮನೆ, ಗಿರೀಶ್ ನಾಯಕ್ ಕುಕ್ಕನೂರು ಉಪಸ್ಥಿತರಿರುವರು.
ಅಷ್ಠಮಿ ಪ್ರಯುಕ್ತ ಈ ವರ್ಷ ಯಾವುದೇ ಕ್ರೀಡಾ ಸ್ಪರ್ಧೆಗಳು ಜರಗುವುದಿಲ್ಲ, ಹಲವು ವರ್ಷಗಳ ಬಳಿಕ ನಡೆಯುವ ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪಾತ್ರರಾಗುವಂತೆ ಆಡಳಿಯ ಮಂಡಳಿ ತಿಳಿಸಿದೆ.










