ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಟ್ರಸ್ಟ್ ಕೊಡಂಕಿರಿ, ಮರೆಂಗಾಲ ಇದರ ಆಶ್ರಯದಲ್ಲಿ 17ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಆ.
15ರಂದು ನಡೆಯಲಿದೆ.















ಬೆಳಿಗ್ಗೆ 9.00 ಗಂಟೆಗೆ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಸಂಜೆ 6.00 ಗಂಟೆಗೆ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಮರೆಂಗಾಲರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ನಾರಾಲು, ವಿದ್ಯಾಬೋಧಿನೀ ಹಿ.ಪ್ರಾ. ಶಾಲಾ ನಿವೃತ್ತ ಶಿಕ್ಷಕ ವೈ.ಬಿ ಸುಬ್ಬಯ್ಯ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿ ಲಿಖಿತ್ ಎಂ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಬಳಿಕ
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ ಗಂಟೆ 7.30ರಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ
ಬಾಳಿಲ-ಮುಪ್ಪೇರ್ಯ ಇದರ ನೇತೃತ್ವದ ಮಕ್ಕಳ ತಂಡದಿಂದ ಯಕ್ಷಗಾನ ಗಜೇಂದ್ರ ಮೋಕ್ಷ ನಡೆಯಲಿದೆ.










