ಸ್ನೇಹಿತರ ಕಲಾಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ 27ನೇ ವರ್ಷ ಮೊಸರು ಕುಡಿಕೆ ಕಾರ್ಯಕ್ರಮ ಆ. 15 ಮತ್ತು ಆ. 17ರಂದು ನಡೆಯಲಿದೆ.
ಆ. 15ರಂದು ಅಪರಾಹ್ನ 2 ಗಂಟೆಯಿಂದ ಅಟ್ಟಿ ಮಡಿಕೆ ಮೊಸರುಕುಡಿಕೆ – 2025 ನಡೆಯಲಿದೆ. ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ ಶೋಭಾಯಾತ್ರಗೆ ಚಾಲನೆ ನೀಡಲಿದ್ದಾರೆ. ಸ್ನೇಹಾಂಜಲಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಮತ್ತು ಶ್ರೀಕೃಷ್ಣ ಲೀಲಾ ವೈಭವ ನಡೆಯಲಿದೆ.















ಬೆಳ್ಳಾರೆ ಪೇಟೆಯ 5 ಕಡೆಗಳಲ್ಲಿ ಅಟ್ಟಿ ಮಡಿಕೆ ಮೊಸರುಕುಡಿಕೆ ನಡೆಯಲಿದೆ. ಸಂಜೆ 5 ಗಂಟೆಗೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡುರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ. 10,010/, ದ್ವಿ. 6006/-, ತೃ. 3003/- ದೊರೆಯಲಿದೆ.
ಆ. 17ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರಾಹ್ನ 2.30ರಿಂದ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ನಡಯಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಬೆಳ್ಳಾರೆ ಕೆಪಿಎಸ್ ಉಪಪ್ರಾಂಶುಪಾಲೆ ಉಮಾಕುಮಾರಿಯವರಿಗೆ ಗುರುರತ್ನ ಪ್ರಶಸ್ತಿ, ನಿವೃತ್ತ ಯೋಧ ಶ್ರೀಧರ ಎಸ್. ಪೂಜಾರಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕುಮಾರ್ ರೈ ಬೆಳ್ಳಾರೆಯವರಿಗೆ ಸನ್ಮಾನ, ವಿದುಷಿ ಹೇಮಸ್ವಾತಿ ಕುರಿಯಾಜೆಯವರಿಗೆ ಅಭಿನಂದನೆ ಹಾಗೂ ಎಸ್.ಎಸ್‌ಎಲ್.ಸಿ. ರಾಜ್ಯಕ್ಕೆ 4ನೇ ಸ್ಥಾನ ಪಡೆದ ಶರಧಿ ನೆಟ್ಟಾರು ಮತ್ತು ಎಸ್.ಎಸ್‌ಎಲ್.ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಬೆಳ್ಳಾರೆ ಕೆಪಿಎಸ್ ನಲ್ಲಿ ಟಾಪರ್ ಧನ್ಯಶ್ರೀ ನೆಲ್ಲಿಗುಡ್ಡೆಯವರಿಗೆ ಸಾಧಕ ಪುರಸ್ಕಾರ ನಡೆಯಲಿದೆ. ಚಿಕ್ಕ ಮಕ್ಕಳಿಗೆ ಪ್ರಾಯವಾರು ಮುದ್ದುಕೃಷ್ಣ ಸ್ಪರ್ಧೆ ಸೇರಿದಂತೆ ಬೆಳಿಗ್ಗೆಯಿಂದ ಮಕ್ಕಳಿಗೆ, ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ, ಶಾಲಾ ಕಾಲೇಜು ವಿಭಾಗ ಹಾಗೂ ಮಹಿಳೆಯರಿಗೆ ತ್ರೋಬಾಲ್ ಮತ್ತು ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.










