ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಆ.9ರಂದು ಆಷಾಢ ಮಾಸದಲ್ಲಿ ಆಚರಿಸುವ ತುಳುನಾಡಿನ ಹಬ್ಬವಾದ ಆಟಿಡೊಂಜಿ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಆಚರಿಸಲಾಯಿತು. ಈ ದಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಂಟೆಬಿಲ್ಲೆ, ತಟ್ಟಿ ನೇಯುವುದು, ಕಲ್ಲಾಟ, ಕೊತ್ತಲಿಗೆ ಬ್ಯಾಟಿನ ಕ್ರಿಕೆಟ್, ಕಪ್ಪೆ ಓಟ ಮುಂತಾದ ಆಟವನ್ನು ಆಡಿಸಲಾಯಿತು. ಅಲ್ಲದೆ ಮಧ್ಯಾಹ್ನದ ಭೋಜನಕ್ಕೆ ಆಷಾಢ ಮಾಸದಲ್ಲಿ ವಿಶೇಷವಾಗಿ ತಯಾರಿಸುವ ಆಟಿ ಪಾಯಸ, ಕಣಿಲೆ, ಪತ್ರೊಡೆ, ಕೆಸುವಿನ ದಂಡಿನ ಖಾದ್ಯಗಳನ್ನು ತಯಾರಿಸಲಾಯಿತು.















ಕಾರ್ಯಕ್ರಮವನ್ನು ಗ್ರಾಮೀಣ ಶೈಲಿಯಲ್ಲಿ ಆಟಿಕಳಂಜ ನೃತ್ಯದೊಂದಿಗೆ ಅಡಿಕೆ ಹಿಂಗಾರವನ್ನು ಅರಳಿಸುವ ಮೂಲಕ ಶಾಲಾ ಅಧ್ಯಕ್ಷ ಚಂದ್ರಶೇಖರ ತಳೂರು ಮತ್ತು ಸಂಚಾಲಕ ಎ. ವಿ .ತೀರ್ಥರಾಮ ಉದ್ಘಾಟಿಸಿದರು . ಶಿಕ್ಷಕಿ ಗೌತಮಿ. ಎಮ್. ಆಟಿಡೊಂಜಿ ದಿನದ ಆಚರಣೆಯ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು, ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ ಶಿಕ್ಷಕಿ ಶೀಲಾವತಿ ಹಾಗೂ ಹಿರಿಯ ಶಿಕ್ಷಕಿ ಉಷಾ. ಕೆ.ಉಪಸ್ಥಿತರಿದ್ದರು. ಶಿಕ್ಷಕರು, ಆಡಳಿತ ಮಂಡಳಿಯ ನಿರ್ದೇಶಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.










