














ಲಯನ್ಸ್ ಕ್ಲಬ್ ಪಂಜ ಹಾಗೂ
ಕಂದಾಯ ಇಲಾಖೆ ನಾಡ ಕಛೇರಿ ಪಂಜ ಇವುಗಳ ಜಂಟಿ ಆಶ್ರಯದಲ್ಲಿ
ಸ್ವಾತಂತ್ರೋತ್ಸವ ಮತ್ತು ಧ್ವಜಸ್ತಂಭ ಕೊಡುಗೆ ಕಾರ್ಯಕ್ರಮ ಆ.15 ರಂದು ಪಂಜ ನಾಡ ಕಛೇರಿಯಲ್ಲಿ ನಡೆಯಿತು.

ನೂತನ ಧ್ವಜಸ್ತಂಭ ಉದ್ಘಾಟನೆಯನ್ನು
ಉಪ ತಹಶೀಲ್ದಾರ್ ಚಂದ್ರಕಾಂತ ಎಂ.ಆರ್. ಮಾಡಿದರು. ಸಭಾಧ್ಯಕ್ಷತೆ ವಹಿಸಿ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ
ಲ। ನಾಗೇಶ್ ಕಿನ್ನಿಕುಮೇರಿ ಧ್ವಜಾರೋಹಣ ನೆರವೇರಿಸಿದರು.

ವೇದಿಕೆಯಲ್ಲಿ ಪಂಜ ಹೋಬಳಿ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ , ಲಯನ್ಸ್ ವಲಯಾಧ್ಯಕ್ಷ ಲ। ದಿಲೀಪ್ ಬಾಬ್ಲುಬೆಟ್ಟು ,
ಕಾರ್ಯದರ್ಶಿ ಲ! ಕರುಣಾಕರ ಎಣ್ಣೆಮಜಲು, ಕೋಶಾಧಿಕಾರಿ ಲ| ವಾಸುದೇವ ಮೇಲ್ಪಾಡಿ,ಕಾರ್ಯಕ್ರಮ ಸಂಯೋಜಕ ಲl ಸಂತೋಷ್ ಜಾಕೆ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲl ಸಂತೋಷ್ ಜಾಕೆ
ಸ್ವಾಗತಿಸಿದರು. ಲlತುಕಾರಾಮ ಏನೆಕಲ್ಲು ಧ್ವಜಾರೋಹಣ ಕಾರ್ಯಕ್ರಮ ನಿರೂಪಿಸಿದರು.ಲ| ವಾಸುದೇವ ಮೇಲ್ಪಾಡಿ
ವಂದಿಸಿದರು. ಕಂದಾಯ ಇಲಾಖೆಯ ಸಿಬ್ಬಂದಿಗಳು , ಲಯನ್ಸ್ ಕ್ಲಬ್ ಸದಸ್ಯರು, ಊರವರು ಪಾಲ್ಗೊಂಡಿದ್ದರು.










