ಪೆರುವಾಜೆ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಶಾಲೆಯಿಂದ ಡಿಗ್ರಿ ಕಾಲೇಜುವರೆಗೆ ಆಕರ್ಷಕ ಸ್ವಾತಂತ್ರ್ಯ ನಡಿಗೆ

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಜಯ ಕುಮಾರ್ ಧ್ವಜಾರೋಹಣ ನೆರವೇರಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರುತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ರತ್ನಾವತಿ ವಂದಿಸಿದರು.
ಬಳಿಕ ಶಾಲಾ ವಠಾರದಿಂದ ಪೆರುವಾಜೆ ಪ್ರಥಮ ದರ್ಜೆ ಕಾಲೇಜುವರೆಗೆ ಮುಖ್ಯ ರಸ್ತೆಯಲ್ಲಿ ಆಕರ್ಷಕವಾಗಿ ಸ್ವಾತಂತ್ರ್ಯ ನಡಿಗೆ ನಡೆಯಿತು.


ನಡಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು ,ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ಉಪಾಧ್ಯಕ್ಷೆ ಶಹಿನಾಜ್, ಶಾಲಾ ಎಸ್.ಡಿ.ಎಂ.ಅಧ್ಯಕ್ಷರು ,ಸದಸ್ಯರು,ಹಾಗೂ ವಿವಿಧ ಸಂಘ,ಸಂಸ್ಥೆಗಳ ಪದಾಧಿಕಾರಿಗಳು,ಲಯನ್ಸ್ ಕ್ಲಬ್ ಅಧ್ಯಕ್ಷ ಯತೀಶ್ ಭಂಡಾರಿ,ನಿವೃತ್ತ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ, ನಿವೃತ್ತ ಎಸ್.ಐ.ದೇವದಾಸ ಶೆಟ್ಟಿ, ಪಿಡಿಒ ತಿರುಮಲೇಶ್ವರ್,ಹಿರಿಯರಾದ ವೆಂಕಟಕೃಷ್ಣ ರಾವ್, ಶಾಲಾ ಶಿಕ್ಷಕರು,ಗ್ರಾಮಸ್ಥರು ಉಪಸ್ಥಿತರಿದ್ದರು.