ಚಟ್ಟೆಕಲ್ಲು ಅಂಗನವಾಡಿ ಕೇಂದ್ರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

0

ಕಲ್ಲುಗುಂಡಿ ಚಟ್ಟೆಕಲ್ಲು ಅಂಗನವಾಡಿ ಕೇಂದ್ರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಚೆಂಬು ಗ್ರಾಮ ಪಂಚಾಯತ್ ಸದಸ್ಯ ರಮೇಶ ಹೆಚ್ ನೆರವೇರಿಸಿ ಮಾತನಾಡಿ ಅವರು ದೇಶದ ಯೋಧರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ವನ್ನು ಈ ಸಮಯದಲ್ಲಿ ಸ್ಮರಿಸುತ್ತಾ ಸ್ವಾತಂತ್ರ್ಯ ವನ್ನು ದೇಶದ ಒಳಿತಿಗಾಗಿ ಹಾಗೂ ಉನ್ನತಿಗಾಗಿ ಕರ್ತವ್ಯ ನಿರ್ವಹಿಸೊಣ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಅರ್ಚನಾ ಡಿ.ಕೆ.ಅಂಗನವಾಡಿ ಕೇಂದ್ರದ ಸ್ಥಳ ದಾನಿ ಗೊಪಾಮ್ಮ , ಸುಂದರ, ಅಶಾ ಕಾರ್ಯಕರ್ತೆ ಮೇರಿ ಶೋಭಾ, ದೇವಕಿ, ರುಕ್ಸನ, ಅಲಿ, ಜೌರ, ಗ್ರಾಮಸ್ಥರು ಪೋಷಕರು ಹಾಜರಿದ್ದರು.