
ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮಶಾಲೆಯಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ನಿವೃತ್ತ ಸೈನಿಕರಾದ ಸೈನುದ್ಧೀನ್ ಧ್ವಜಾರೋಹಣವನ್ನು ನಿರ್ವಹಿಸಿ , ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿಧ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಫಾದರ್ ಪೌಲ್ ಕ್ರಾಸ್ತಾ, ಶಾಲಾ ಶಿಕ್ಷಕ ರಕ್ಷಕ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷಲುಕಾಸ್ ಟಿ. ಐ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಲಗೋರಿ ಮೊಂತೆರೊ ಶಾಲಾ, ಮುಖ್ಯೋಪಾಧ್ಯಾಯ ಅನಿತಾ ಫರ್ನಾಂಡಿಸ್ , ಶಿಕ್ಷಕರು ಎಂ.ಅನಿತಾ, ಉಪ ಮುಖ್ಯಾಪಾಧ್ಯಯರು ವನಿತಾ, ಸಂಪಾಜೆ ಗ್ರಾಂ.ಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು, ಸಂಪಾಜೆ ಗ್ರಾಂ.ಪಂ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಸದಸ್ಯ ಜಗದೀಶ್ ರೈ,, ಸುಶೀಲಾ, ಅನುಪಮಾ, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.

























