ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಸಾಹಿತ್ಯ ವೇದಿಕೆಯ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು.
ಸಮಾರಂಭದಲ್ಲಿ ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಸಾಹಿತ್ಯ ಗುರುತಿ ಬಿಡುಗಡೆ ಮತ್ತು ಕರೋಕೆ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಸಾಹಿತಿ, ಜ್ಯೋತಿಷಿ, ಚಿತ್ರ ನಿರ್ದೇಶಕ, ಗಾಯಕ, ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಅವರು ವಹಿಸಿದ್ದರು. ಉದ್ಘಾಟನೆಯನ್ನು ನಿವೃತ್ತ ಖ್ಯಾತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಅವರು ಮಾಡಿದರು.









ಘನ ಉಪಸ್ಥಿತಿಯನ್ನು ವಹಿಸಿದ್ದ ಅಜ್ಜಾವರದ ಚೈತನ್ಯ ಸೇವಾಶ್ರಮ ಸಂಚಾಲಕ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿಯವರ ಕೃತಿಯನ್ನು ಬೆಂಗಳೂರಿನ ಖ್ಯಾತ ಹಿರಿಯ ಸಾಹಿತಿ ಹಾ.ಮ ಸತೀಶ್ ಬಿಡುಗಡೆ ಮಾಡಿದರು. ಸಾಧಕರಿಗೆ ಪುತ್ತೂರಿನ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಯವರು ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ಡಾ. ಪ್ರಭಾಕರ ಸುಶೀಲ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ವಿಶೇಷ ಜೇನು ಕೃಷಿ ದಂಪತಿಗಳಾದ ದಂಪತಿಗಳಾದ ಕುಮಾರ್ ಪೆರ್ನಾಜೆ ಮತ್ತು ಸೌಮ್ಯ ದಂಪತಿಗಳಿಗೆ ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ, ಮೋಹನ್ ನಂಗಾರು ಅವರಿಗೆ ಆದರ್ಶ ಹೃದಯವಂತ ಪ್ರಶಸ್ತಿ, ಸಾವಿತ್ರಿ ದೊಡ್ಡಮನೆ ಅವರಿಗೆ ಚಂದನ ಕೃಷಿ ರತ್ನ ಪ್ರಶಸ್ತಿ, ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿ, ಗಾಯಕಿ ಮಹಿಮ ಭಜಗೋಳಿ ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿ ಕಾರ್ಯಕ್ರಮದಲ್ಲಿ 24 ಕವಿಗಳು ಕವನ ವಾಚನ ಮಾಡಿದರು. ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ 16 ಜನ ಗಾಯಕರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನಿಂದ ಆಗಮಿಸಿದ ನಾಲ್ಕು ಜನ ವಿಶೇಷ ಚೇತನ ರಾಷ್ಟ್ರೀಯ ಕ್ರೀಡಾಪಟುಗಳಿಗೆ ಚಂದನ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾರ್ಥನಾ ಗೀತೆಯನ್ನು ಕವಿ ಎಂ. ತಾಹಾ ಹಾಡಿದರು. ಪ್ರಸ್ತಾವಿಕ ಭಾಷಣವನ್ನು ಸುಮಂಗಲ ಲಕ್ಷ್ಮಣ್ ಕೋಳಿವಾಡ ಮಾಡಿದರು. ಸ್ವಾಗತ ಭಾಷಣ ಶ್ರೀಮತಿ ಅನುರಾಧ ಶಿವಪ್ರಕಾಶ್ ಅವರು ನೆರವೇರಿಸಿದರು. ಗಾಯಕ ಪೆರುಮಾಳ್ ಲಕ್ಷ್ಮಣ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಧನ್ಯವಾದ ಸಮರ್ಪಣೆಯನ್ನು ಕಡಬದ ಕವಿ ಸಮ್ಯಕ್ತ್ ಜೈನ್ ಮಾಡಿದರು.










