ತುಂಬಿ ತುಳುಕಿದ ಹೊರಾಂಗಣ








ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಭಾರೀ ಪ್ರಮಾಣದ ಭಕ್ತರು ಜಮಾವಣೆಗೊಂಡಿದ್ದರು.

ದೇವಾಲಯ, ಆಸುಪಾಸಿಗಳಲ್ಲಿ ಭಕ್ತರೇ ತುಂಬಿದ್ದದ್ದು ಕಂಡು ಬಂದಿದೆ. ದೇವರ ದರ್ಶನಕ್ಕೂ, ಊಟದಲ್ಲೂ ಭಾರಿ ಉದ್ದದ ಸರತಿಯ ಸಾಲು ಕಂಡು ಬಂತು. ದೇವಾಲಯದ ಹೊರಭಾಗದಲ್ಲೂ ಭಕ್ತರೇ ತುಂಬಿದ್ದು, ಪಾರ್ಕಿಂಗ್ ಸ್ಥಳಗಳು ಪೂರ್ಣ ಪ್ರಮಾಣದಲ್ಲಿ ತುಂಬಿ ರಸ್ತೆ ಬದಿ ನಿಲ್ಲಿಸುವ ಪರಿಸ್ಥಿತಿಯೂ ಬಂದಿತ್ತು.




