ಸುಳ್ಯದ ಲಯನ್ಸ್ ಕ್ಲಬ್ ವತಿಯಿಂದ ಆಟಿ ಸಂಭ್ರಮಾಚರಣೆ

0

ಸುಳ್ಯದ ಲಯನ್ಸ್ ಕ್ಲಬ್ ವತಿಯಿಂದಆಟಿಸಂಭ್ರಮಾಚರಣೆಯನ್ನು ಆ.15 ರಂದು ಲಯನ್ಸ್ ಸೇವಾ ಸದನದಲ್ಲಿ ಆಚರಿಸಲಾಯಿತು.

ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಲಯನ್ ಕಮಲಾ ಬಾಲಚಂದ್ರ ಗೌಡ ರವರು ಹಿಂಗಾರ ಅರಳಿಸಿ ಹಾಗೂ ಚೆನ್ನೆಮಣೆ ಆಡುವ ಮೂಲಕ ಲಯನ್ ಹರಿಣಿ ಸದಾಶಿವ ರವರು ಆಟಿ ಸಂಭ್ರಮಾಚರಣೆಯನ್ನು ಉದ್ಘಾಟಿಸಿದರು.


ವೇದಿಕೆಯಲ್ಲಿ ಲಯನ್ ಎಂ.ಬಿ ಸದಾಶಿವ, ಲಯನ್ ಜಯರಾಮ ದೇರಪ್ಪಜ್ಜನ ಮನೆ, ಲಯನ್ ಚಂದ್ರಶೇಖರ ನಂಜೆ, ಕಾರ್ಯದರ್ಶಿ ಲಯನ್ ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಲಯನ್ ಜತ್ತಪ್ಪ ರೈ, ಲಯನ್ ರಾಮಕೃಷ್ಣ ರೈ
ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ
ಆಟಿ ತಿಂಗಳ ಹಾಗೂ ಆಚರಣೆಯ ಕುರಿತು ಲಯನ್ ಚಂದ್ರಾವತಿ ಬಡ್ಡಡ್ಕ ರವರು ಮಾಹಿತಿ ನೀಡಿದರು. ರಾತ್ರಿ
ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕ್ಲಬ್ಬಿನ ಸದಸ್ಯರು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ವಿಶೇಷ ಆಹಾರ ಖಾದ್ಯಗಳನ್ನು ಆಗಮಿಸಿದ ಎಲ್ಲರಿಗೂ ಬಡಿಸಿದರು.