
ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆ.17ರಂದು ಕಲ್ಲಗುಡ್ಡೆ ಮೈದಾನದಲ್ಲಿ ನಡೆಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕಲ್ಲಗುಡ್ಡೆ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿನ.ಪಂ. ಸದಸ್ಯ ರಾಜು ಪಂಡಿತ್ ಸುಳ್ಯ, ಎ.ವಿ.ಎಸ್.ಎಸ್. ಸುಳ್ಯ ಶಾಖೆ ಸ್ಥಾಪಕರಾದ ಚಂದ್ರಶೇಖರ ಪಲ್ಲತಡ್ಕ, ಪಂಜ ಗಸ್ತು ಅರಣ್ಯ ಪಾಲಕರಾದ ಮನೋಹರ ಪಿ.ಬಿ., ಅಡ್ಪಂಗಾಯ ಸ.ಪ್ರೌಢಶಾಲಾ ಉಪಾಧ್ಯಕ್ಷ ಶೌಕತ್ ಅಲಿ ಮೊದಲಾದವರು ಇದ್ದರು.
















ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ಆಯೋಜನೆಗೊಂಡವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷ್ಣಪ್ಪ ಕಲ್ಲಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಸಾದ್ ರೈ ಮೇನಾಲ ಬಹುಮಾನ ವಿವರಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ್ ಗಬ್ಲಡ್ಕ ಧಾರ್ಮಿಕ ಉಪನ್ಯಾಸಗೈದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ರಂಜಿತ್ ರೈ ಮೇನಾಲ, ಕೃಷಿಕರಾದ ಸುಜೀತ ರೈ ಮೇನಾಲ, ಗ್ರಾ.ಪಂ. ಸದಸ್ಯೆ ಗೀತಾ ಕಲ್ಲಗುಡ್ಡೆ ಇದ್ದರು.
ಕಾರ್ಯಕ್ರಮ ಶ್ರೀಧರ ಮಣಿಯಾಣಿ ಹಾಗೂ ಚಂದ್ರಶೇಖರ ಪಲ್ಲತಡ್ಕ ನಿರೂಪಿಸಿದರು.










