ಪುಟಾಣಿಗಳಿಂದ ಅರ್ಥಪೂರ್ಣ ಸೇವೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ “ಪ್ಲಾಸ್ಟಿಕ್” ಮುಕ್ತವಾಗಿಸುವ ನೆಲೆಯಲ್ಲಿ ಶ್ರೀಕ್ಷೇತ್ರದ ಮಕ್ಕಳ ಭಜನಾ ತಂಡದ ಮಕ್ಕಳಿಂದ ಪ್ರಸಾದ ವಿತರಿಸುವ ಕಾಗದದ ಕವರ್ ನ್ನು ತಯಾರಿಸಿ ನೀಡಿದರು. ಪುಟ್ಟ ಸೇವೆಯಾದರೂ ಅರ್ಥಪೂರ್ಣವಾಗಿಸಿದರು.ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ದೇಗುಲದ ಅರ್ಚಕರಾದ ರಾಮಚಂದ್ರ ಭಟ್ ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಕ್ಕಳಿಗೆ ಪ್ರಸಾದ ನೀಡಿದರು.


























