ಬಾಳಿಲದಲ್ಲಿ ನಾಡಹಬ್ಬ ಗಣೇಶೋತ್ಸವ

0

ಸರಿ ತಪ್ಪುಗಳನ್ನು ಅರಿತುಕೊಳ್ಳುವ ಕಾರ್ಯ ಇಲ್ಲಿ ನಡೆದಿದೆ – ಪ್ರದೀಪ್ ಕುಮಾರ್ ರೈ ಪನ್ನೆ


ಗಣೇಶೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಸಂಘಟನೆ ಅತ್ಯಗತ್ಯ. ನಮ್ಮಲ್ಲಿರುವ ನ್ಯೂನತೆಗಳನ್ನು ವಿಸರ್ಜಿಸುವ ಹೊತ್ತು. ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಕಾರ್ಯ ಗಣೇಶೋತ್ಸವದ ಮೂಲಕ ಆಗಬೇಕು ಎಂದು ಜೆಸಿಐ ವಲಯ 15ರ ಪೂರ್ವ ವಲಯಾಧಿಕಾರಿ ಪ್ರದೀಪ್ ಕುಮಾರ್ ರೈ ಪನ್ನೆ ಹೇಳಿದರು.

ಅವರು ಆ. 27ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ ನಡೆದ 42ನೇ ವರ್ಷದ ನಾಡಹಬ್ಬ ಗಣೇಶೋತ್ಸವ -2025ರ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ದಿವಾಕರ ಮುಪ್ಪೇರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಳಿಲ ಗ್ರಾ.ಪಂ.‌ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ಮತ್ತು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೆ. ಅಜಿತ್ ರಾವ್ ಭಾಗವಹಿಸಿದ್ದರು.

ಸಮಿತಿಯ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಅರ್ಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲುರವರಿಗೆ ಈ ಸಂದರ್ಭದಲ್ಲಿ ಗೌರಾವಾರ್ಪಣೆ ಮಾಡಲಾಯಿತು. ವೇದಿಕೆಯಲ್ಲಿದ್ದ ಬಾಳಿಲ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಸಂಚಾಲಕರಾದ ಪಿ.ಜಿ.ಎಸ್.ಎನ್. ಪ್ರಸಾದ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಸುದರ್ಶನ ರೈ ಬಾಳೆಹಿತ್ಲು ವಂದಿಸಿದರು.

ಶ್ರೀಮತಿ ರಮ್ಯಪ್ರಮೋದ್ ಸನ್ಮಾನಪತ್ರ ವಾಚಿಸಿದರು. ಕೀರ್ತನ್ ಡಿ.ಎಸ್‌‌. ಪ್ರಾರ್ಥಿಸಿದರು. ರವೀಂದ್ರ ರೈ ಟಪ್ಪಾಲುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಬೆಳಿಗ್ಗೆ ಗಣಪತಿ ಪ್ರತಿಷ್ಠೆ, ಪೂಜಾ ಕಾರ್ಯ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ಭೋಜನ ನಡೆಯಿತು. ರಾತ್ರಿ 8.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಕುಣಿತ ಭಜನೆಯೊಂದಿಗೆ ನಾಸಿಕ್ ಬೀಟ್ಸ್ ಜೊತೆಯಾಗಿ ವೈಭವದ ಶೋಭಾಯಾತ್ರೆ ನಡೆದು ಬೊಮ್ಮನಮಜಲು ಹೊಳೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಸಂಜೆ 6.30ರಿಂದ ಕೆ.ಎಸ್.ಎಸ್. ಕಾಲೇಜಿನ ನೃತ್ಯ ರಂಡದಿಂದ ನೃತ್ಯ ಸಂಭ್ರಮ ನಡೆಯಲಿದೆ.

ಪ್ರೀತಿ, ದಯೆ, ಕರುಣೆ ಮತ್ತು ತಾಳ್ಮೆ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಯುವಕರು ಮುಂದೆ ಸಜ್ಜನ ಪ್ರಜೆಗಳಾಗಬೇಕು. ಗಣೇಶೋತ್ಸವದ ಮೂಲಕ ಈ ಭಾಗದ ಜನರಿಗೆ ಆತ್ಮೀಯತೆಯಿಂದ ಒಂದಾಗಲು ಅವಕಾಶ ಕಲ್ಪಿಸಿದೆ ಯಶೋಧರ ನಾರಾಲು