ಧಾರ್ಮಿಕ ಸಭೆ ಹಾಗೂ ಅಭಿನಂದನಾ ಸಮಾರಂಭ
ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 29 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಆ. 27 ರಂದು ನಡೆಯಿತು.
ಬೆಳಗ್ಗೆ ತಂತ್ರಿಯವರ ಸಮ್ಮುಖದಲ್ಲಿ ಗಣಪತಿ ಹವನವಾಗಿ ವಿಗ್ರಹ ಪ್ರತಿಷ್ಠಾಪನೆಯಾಯಿತು.

ಸ್ಥಳೀಯ ಭಜಕರಿಂದ ಭಜನಾ ಸೇವೆಯು ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಛದ್ಮ ವೇಷ ಸ್ಪರ್ಧೆಯು ನಡೆಯಿತು. ಮದ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಧಾರ್ಮಿಕ ಸಭೆ – ಸನ್ಮಾನ ಮತ್ತು ಅಭಿನಂದನಾ ಸಮಾರಂಭ
ಧಾರ್ಮಿಕ ಸಭೆಯು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಾಮನ ಕೊಯಿಂಗಾಜೆ ಯವರ ಅದ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಯವರು ದೀಪ ಪ್ರಜ್ವಲಿಸಿ “ಗಣೇಶೋತ್ಸವದ ಆಚರಣೆಯ ಮೂಲಕ ಪರಿಸರದ ಮಕ್ಕಳಲ್ಲಿ ಪ್ರತಿಭೆ ಯು ಅನಾವರಣ ಗೊಳ್ಳುವುದು. ದೇವರ ಹಾಗೂ ಧರ್ಮದ ಸೇವೆಯ ಮುಖಾಂತರ ಊರಿನಲ್ಲಿ ಸಂಘಟನಾ ಶಕ್ತಿಯ ಬೆಳವಣಿಗೆಯಾಗುವುದು. ಕೊಲ್ಚಾರು ಭಾಗಕ್ಕೆ ಈ ಬಾರಿ 2 ರಾಂಕ್ ಬಂದಿರುವುದು ಊರಿಗೆ ಹೆಮ್ಮೆ ಎಂದು ಹೇಳಿದರು.
















ಕರ್ಲಪ್ಪಾಡಿ ಶಾಸ್ತ್ರವೇಶ್ವರ ದೇವಸ್ಥಾನದ ಪೂರ್ವಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ರವರು ” ಶಕ್ತಿಯ ಮೇಲೆ ಅಚಲವಾದ ದೃಢ ನಂಬಿಕೆ ಇರಿಸಿದರೆ ಮಾತ್ರ ಅಭಿಷ್ಟ ಸಿದ್ದಿಯಾಗುವುದು. ಸಾಮಾನ್ಯರೂ ಆರಾಧಿಸಲ್ಪಡುವ ಹಾಗೂ ದೈವ, ದೇವರ ಯಾವುದೇ ಕಾರ್ಯಕ್ಕೆ ಪ್ರಧಾನ ದೇವರಾಗಿ ಪೂಜಿಸಲ್ಪಡುವ ಗಣಪತಿಯು ವಿಘ್ನ ನಿವಾರಕನು ಹಾಗೂ ವಿಘ್ನ ಕಾರಕನೂ ಆಗಿರುವನು. ಭೂಮಿಯಮಣ್ಣಿನಿಂದ ಲೇಪಿಸಲ್ಪಟ್ಟು ಹುಟ್ಟಿ ಬಂದ ಗಣಪತಿಯು ಗಣೇಶೋತ್ಸವ ಆಚರಿಸಿ ಮತ್ತೆ ನೀರಿನ ಮೂಲಕ ವಿಸರ್ಜನೆಯಾಗಿ ಭೂಮಿಗೆಸೇರಿಸಲ್ಪಡುವುದರಿಂದ ಮಾಲಿನ್ಯ ಎಂಬುದು ಇಲ್ಲ.ಬಾಲಗಂಗಾಧರನಾಥ ತಿಲಕರ ಪ್ರೇರಣೆಯಿಂದ ಗಣೇಶೋತ್ಸವದ ಮೂಲಕ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು. ಧಾರ್ಮಿಕ ಹಿಂದೂಗಳು ಜಾಗೃತ ಹಿಂದೂವಾಗಿ ಪರಿವರ್ತನೆ ಗೊಂಡು ಕೌಟುಂಬಿಕ ವ್ಯವಸ್ಥೆಯೊಂದಿಗೆ ಕುಟುಂಬ ಪ್ರಭೋಧನೆ, ಭಜನೆ, ಪರಿಸರ ಸ್ವಚ್ಛ, ಸಾಮಾಜಿಕ ಶಿಷ್ಟಾಚಾರ ಹಾಗೂ ಸ್ವದೇಶಿ ಮನೋಭಾವನೆಗಳನ್ನು ಇರಿಸಿಕೊಂಡು ನಮ್ಮ ಧರ್ಮ ಕ್ಷೇತ್ರದ ಉಳಿವಿಗೆ ಪಣ ತೋಡುವಂತಾಗಬೇಕು ಎಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಅಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಅಲೆಟ್ಟಿ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ದಿನೇಶ್ ಕಣಕ್ಕೂರ್, ಗೀತಾ ಕೊಲ್ಚಾರು, ಅಲೆಟ್ಟಿ ಸೊಸೈಟಿ ನಿರ್ದೇಶಕ ಕರುಣಾಕರ ಹಾಸ್ಪರೆ, ಚಿದಾನಂದ ಕೊಲ್ಚಾರು, ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರಾಂಕ್ ಪಡೆದ ವೇದಾಂತ್ ಕೆ. ಎಸ್ ಕೊಲ್ಚಾರು, 7ನೇ ರಾಂಕ್ ಪಡೆದ ಯಶಸ್ವಿ ಕೊಯಿಂಗಾಜೆ ಹಾಗೂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಸುಮಾರು 14 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವಿವಿಧ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಭಜಕರಾದ
ಶ್ರೀಧರ ಕೊಯಿಂಗಾಜೆ ಯವರು ಪ್ರಾರ್ಥಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಪುರುಷೋತ್ತಮ ಕೊಲ್ಚಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಪ್ರದೀಪ್ ಕೊಲ್ಲರಮೂಲೆ ಬಹುಮಾನ ಪಟ್ಟಿ ವಾಚಿಸಿದರು. ಸುದರ್ಶನ ಪಾತಿಕಲ್ಲು ವಂದಿಸಿದರು.
ಸ. ಪ್ರ. ಕಾಲೇಜು
ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿದರು.










