ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಆ. 31ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
















ಸಂಘದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ವರದಿ ವಾಚಿಸಿದರು.
ಸಂಘದ ಅಧ್ಯಕ್ಷ ಹರ್ಷ ಜೋಗಿಬೆಟ್ಟು, ನಿರ್ದೇಶಕರಾದ ಎನ್. ವಿಶ್ವನಾಥ ರೈ, ಶುಭಕುಮಾರ ಬಾಳೆಗುಡ್ಡೆ,
ಶ್ರೀಮತಿ ಪಂಕಜಾಕ್ಷಿ ಮರುವಂಜ,
ಶ್ರೀಮತಿ ಸರಿತಾ ಕಂಡಿಕಟ್ಟ,
ಮ ಬಿ. ಪ್ರಭಾಕರ ಆಳ್ವ ಬಜನಿಗುತ್ತು, ರಾಮಪ್ರಸಾದ್ ಕಾಂಚೋಡು, ಸುಬ್ರಾಯ ಭಾರದ್ವಾಜ ಕೆದಿಲ, ರವಿಪ್ರಸಾದ್ ರೈ ಕಳಂಜ, ರವೀಂದ್ರ ರೈ ಟಪಾಲುಕಟ್ಟೆ, ಪ್ರಶಾಂತ ಕುಮಾರ್ ಕಿಲಂಗೋಡಿ, ರಾಮಣ್ಣ ಪರವ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಗೀತಾ ಎ, ಶ್ರೀಮತಿ ಅಶ್ವಿನಿ ರಾಜೇಶ್ ಪಟ್ಟೆ, ಪ್ರತಿಮಾ ಪ್ರಾರ್ಥಿಸಿದರು. ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಸಂಘದ ಅಭಿವೃದ್ಧಿ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸಿಬ್ಬಂದಿಗಳು ಸಹಕರಿಸಿದರು.










