ಮುಹಿಯದ್ದೀನ್ ಜುಮ್ಮಾ ಮಸೀದಿ ಜಾಲ್ಸೂರು ಅಡ್ಕಾರ್ ಇದರ ವಠಾರದಲ್ಲಿ ಈದ್ ಮಿಲಾದ್ ಹಬ್ಬಾಚರಣೆಯ ಅಂಗವಾಗಿ ಎಸ್ ವೈ ಎಸ್ ಇಸಾಬ ತಂಡ ಹಾಗೂ ಮೀಲಾದ್ ಸಮಿತಿ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.









ಅಭಿಯಾನದಲ್ಲಿ ಸ್ಥಳೀಯ ಮಸೀದಿ ಹಾಗೂ ಮದ್ರಸಾ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ ಮಾಣಿ ಮೈಸೂರು ಹೆದ್ದಾರಿಯ ಸಮೀಪ ವಿರುವ ಕಾಡು ಬಳ್ಳಿಗಳನ್ನು ತೆರುಗೊಳಿಸಿ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಂಡರು.

ಈ ಸಂದರ್ಭದಲ್ಲಿ ಇಸಾಬಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಮಿಲಾದ್ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು,ಸದಸ್ಯರು ಜಮಾಅತಿನ ಸದಸ್ಯರುಗಳು ಭಾಗವಹಿಸಿದ್ದರು.










