ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ನಿಂತಿಕಲ್ಲಿನಲ್ಲಿ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಚಾಂಪಿಯನ್ ಆಗಿ ಸತತ ಎರಡನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ.















ತಂಡದ ನಾಯಕ ತೇಜಸ್ ಕೆ.ಎಲ್ ಅತ್ಯುತ್ತಮ ಆಲ್ ರೌಂಡರ್ ವೈಯಕ್ತಿಕ ಬಹುಮಾನ ಪಡೆದರು.
ವಿಜೇತ ತಂಡದಲ್ಲಿ ತೀರ್ತೇಶ್, ಮೋಕ್ಷಿತ್ ಎಸ್, ಸುಮಂತ್, ಜೀವನ್, ಪ್ರಣೀತ್ ಡಿ’ಸೋಜಾ, ಅಕ್ಷಯ್, ಪ್ರಜ್ವಲ್, ಜೀವನ್, ಜೀವಿತ್, ಪ್ರೀತಂ ಅತ್ಯುತ್ತಮ ಪ್ರದರ್ಶನ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ತಂಡಕ್ಕೆ ತರಬೇತಿ ನೀಡಿದ್ದರು. ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಮತ್ತು ಜೀವನ್ ಎಸ್.ಎಚ್ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ವಿಜೇತ ತಂಡವನ್ನು ಅಭಿನಂದಿಸಿದರು.










