ಪ್ರಯತ್ನವೇ ಯಶಸ್ಸಿಗೆ ಮುನ್ನುಡಿ : ಡಾ. ದಾಮ್ಲೆ
ಸೆ.13ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರದ ಗಡಿ ಭದ್ರತಾದಳಕ್ಕೆ ಆಯ್ಕೆಯಾಗಿರುವ ಸುಳ್ಯದ ಸಾಧಕಿ ಕು. ಸುಶ್ಮಿತಾ ಬೆದ್ರುಪಣೆ ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಬಿ. ಎಸ್ಸಿ. ವಿಭಾಗದ ಅಂತಿಮ ಸೆಮಿಸ್ಟರ್ ನ ಪರೀಕ್ಷೆಯಲ್ಲಿ 650 ರಲ್ಲಿ 650 ಅಂಕಗಳಿಸಿ 100% ಫಲಿತಾಂಶ ಪಡೆದಿರುವ ಕುಮಾರಿ ಸೌಮ್ಯ ಎಸ್. ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಬಡತನದ ಬದುಕು ನಮ್ಮಲ್ಲಿ ಸಾಧಿಸುವ ಛಲವನ್ನು ಹುಟ್ಟಿಸುತ್ತದೆ. ಸಾಧನೆಗೆ ತಪಸ್ಸಿನಂತಹ ಪ್ರಯತ್ನ ಅಗತ್ಯವಾಗಿದೆ. ಸುಶ್ಮಿತಾ ಮತ್ತು ಸೌಮ್ಯ ರವರ ಸಾಧನೆಯ ಕ್ಷೇತ್ರಗಳು ಬೇರೆ ಬೇರೆಯಾಗಿದ್ದರೂ ನಮ್ಮ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ. ಇವರಂತೆ ನೀವು ಸಾಧನೆಯ ಶಿಖರವನ್ನೇರಬೇಕು ಎಂಬುದು ನನ್ನ ಅಭಿಲಾಷೆ” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು.









ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನ್ಯೂಸ್ ನಾಟ್ ಔಟ್ ನ ಪ್ರಧಾನ ಸಂಪಾದಕ ಹೇಮಂತ್ ಅಭಿನಂದನೆಯ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಕು. ಸೌಮ್ಯ ಹಾಗೂ ಸುಶ್ಮಿತಾ ಬೆದ್ರುಪಣೆಯವರು ಅಬಿಸಿಕೆ ವ್ಯಕ್ತಪಡಿಸಿದರು.
ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಪ್ರಮೇಯ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ವನಿತಾ ಪಿ.ಕೆ ವಂದಿಸಿದರು. ಶಾಲಾ ಶಿಕ್ಷಕ ದೇವಿ ಪ್ರಸಾದ ಜಿ.ಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










