
ಅರಂತೋಡು ಗ್ರಾಮದ ಪಿಂಡಿಮನೆ ರಾಧಾಕೃಷ್ಣ ಎಂಬವರ ಮನೆ ಹತ್ತಿರದ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಅಡಿಕೆ, ರಬ್ಬರ್ ಕರಕಲಾದ ಘಟನೆ ಸೆ.13ರಂದು ರಾತ್ರಿ ನಡೆದಿದೆ.









ರಾತ್ರಿ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆಯಿತು. ಅಗ್ನಿಶಾಮಕ ದಳದವರಿಗೆ ಮಾಹಿತಿ ಬಂದು ಅವರು ಸುಳ್ಯದಿಂದ ಹೋಗಿ, ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಸುಮಾರು 1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.











