














ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ನವರು ಮಂಗಳೂರಿನ ದೇರಳಕಟ್ಟೆಯ ನವಾಜ್ ಸಂಕೀರ್ಣದಲ್ಲಿಯ ಅಲ್ ಸಲಾಮ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಕಲಾವಿದ, ಕವಿ, ಕಥೆಗಾರ, ಸಂಘಟಕ, ಗಾಯಕ, ನಟ, ಚಿತ್ರ ನಿರ್ದೇಶಕ, ಅಂಕಣಕಾರ ಮತ್ತು ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಸಮಾರಂಭದ ವೇದಿಕೆಯಲ್ಲಿ ಗಣ್ಯರ ಸಮಕ್ಷಮ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 25 ವರ್ಷಗಳಿಂದ ಸುಳ್ಯದಲ್ಲಿ ತಮ್ಮ ವಂಶಪಾರಂಪರ್ಯ ಜ್ಯೋತಿಷ್ಯ ವೃತ್ತಿಯನ್ನು ಮಾಡಿಕೊಂಡು ಸಂಗೀತ ಮತ್ತು ಸಾಹಿತ್ಯದ ಸಂಘಟನೆಗಳ ಮೂಲಕ ನೂರಾರು ಜನ ಕಲಾವಿದರಿಗೆ ಪ್ರೋತ್ಸಾಹಿಸಿ ಬೆಳಕಿಗೆ ತಂದಿರುವ ಎಚ್. ಭೀಮರಾವ್ ವಾಷ್ಠರ್ ಅವರು ಸುಳ್ಯದಿಂದ ಬೆಂಗಳೂರಿಗೆ ತಮ್ಮ ವಾಸಸ್ಥಳ ಬದಲಾಯಿಸಿದ್ದರಿಂದ ವಾಷ್ಠರ್ ಅವರಿಗೆ ಅಭಿನಂದನಾ ಸನ್ಮಾನ ಮಾಡಿ ಬೀಳ್ಕೊಡಲಾಯಿತು. ಈ ಸಂದರ್ಭ ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ಅಧ್ಯಕ್ಷರಾದ ಕೆ ಎಂ ಇಕ್ಬಾಲ್ ಬಾಳಿಲ, ಪದಾಧಿಕಾರಿಗಳಾದ ಕೆ ಎ ಅಬ್ದುಲ್ ಅಝೀಜ್ ಪುಣಚ, ಅಬೂಬಕರ್ ಅನಿಲಕಟ್ಟೆ, ಹಿರಿಯ ಸಾಹಿತಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಡಾ. ಸುರೇಶ ನೆಗಿಲಗುಳಿ, ಅಬ್ದುಲ್ ರಹಮಾನ್ ಸಂಕೇಶ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.










