ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿಂದಿ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ಸೆ. 22ರಂದು ಆಚರಿಸಲಾಯಿತು.









ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮುಖ್ಯಸ್ಥರಾದ ಪ್ರೊಫೆಸರ್ ಸಂಜೀವ ಕುದ್ಪಾಜೆ ಮಾತನಾಡಿ ದೇಶದಲ್ಲಿ ಹಿಂದಿ ಭಾಷೆಯ ಮಹತ್ವ, ಅವಕಾಶಗಳು ಮತ್ತು ಹೆಚ್ಚಿನ ಉಪಯೊಗಗಳನ್ನು ವಿವರಿಸಿದರು.

ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಮಮ್ತ ಹಿಂದಿ ದಿನಾಚರಣೆ ಕುರಿತು ಮಾತನಾಡಿ ಶುಭಕೋರಿದರು. ಮುಖ್ಯ ಅತಿಥಿಗಳಾದ ಸುಳ್ಯದ ಸರ್ಕಾರಿ ಪದವಿ ಕಾಲೇಜಿನ ಹಿಂದಿ ವಿಭಾಗದ ಪ್ರೊ. ರಾಮಕೃಷ್ಣ ಕೆ.ಎಸ್. ಹಿಂದಿ ಭಾಷೆಯ ಕಲಿಕೆ ಹಾಗು ದೈನಂದಿನ ಜೀವನದಲ್ಲಿ ಹಿಂದಿ ಭಾಷೆಯ ಅಗತ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಮುಂಚಿತವಾಗಿ ಆಸಕ್ತ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ದ್ವಿತೀಯ ಬಿಕಾಂ ನಾ ಪಿ.ತೇಜಶ್ರೀ ಮತ್ತು ತಂಡ ಪ್ರಾರ್ಥಿಸಿದರು. ದ್ವಿತೀಯ ಬಿ.ಬಿ.ಎ ವಿಭಾಗದ ಅಕ್ಷತ್ ಎ.ಐ ಸ್ವಾಗತಿಸಿ, ದ್ವಿತೀಯ ಬಿಕಾಂನ ಹಬ್ಸೀನ ವಂದಿಸಿದರು. ಬಿಸಿಎ ವಿಭಾಗದ ಆಯಿಷಾತ್ ರಿಧ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪನಗೊಂಡಿತು.








