
ಬೆಳ್ಳಾರೆ- ಪೆರುವಾಜೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ. 23 ರಂದು ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಕೋಶ, ಯುವ ರೆಡ್ ಕ್ರಾಸ್ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಭಾಗಿತ್ವದಲ್ಲಿ “ಸ್ವಸ್ಥ್ ನಾರಿ ಸಶಕ್ತ್ ಪರಿವಾರ್ ಅಭಿಯಾನ್” ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಯುಷ್ಮಾನ್ ಆರೋಗ್ಯ ಮಂದಿರ, ಪೆರುವಾಜೆ ಇಲ್ಲಿನ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕು.ರಚನಾ ಬಿ ಎಲ್, ಸ್ನೇಹ ಕ್ಲಿನಿಕ್ ತಾಲ್ಲೂಕು ಆಸ್ಪತ್ರೆ ಸುಳ್ಯ ಇಲ್ಲಿನ ಆಪ್ತ ಸಮಾಲೋಚಕರಾದ ಸೌಮ್ಯ ಹಾಗೂ ಆರೋಗ್ಯ ಉಪಕೇಂದ್ರ ಪೆರುವಾಜೆ ಇಲ್ಲಿನ ಆರೋಗ್ಯ ಸಹಾಯಕರಾದ ರತ್ನಾವತಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ನೈರ್ಮಲ್ಯ ನಿರ್ವಹಣೆ, ಪೋಷಣೆ ಹಾಗೂ ಮುಟ್ಟಿನ ಸುತ್ತಲಿನ ಸಾಮಾಜಿಕ ನಿಷೇದಗಳನ್ನು ಮುರಿಯುವುದರ ಬಗೆಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಸುಬ್ರಹ್ಮಣ್ಯ ಪಿ ಎಸ್ ರವರು ವಹಿಸಿಕೊಂಡಿದ್ದರು.









ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಸುಪ್ರಿಯಾ ಪಿ ಆರ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಮಧು ಎನ್ ಎಮ್ ಉಪಸ್ಥಿತರಿದ್ದರು. ಮಹಿಳಾ ಕೋಶದ ಸಂಯೋಜಕರಾದ ಶ್ರೀಮತಿ ಶಾಲಿನಿ ಆರ್ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ದ್ವಿತೀಯ ಬಿ. ಎ. ವಿದ್ಯಾರ್ಥಿನಿಗಳಾದ ಕು. ಮೋಕ್ಷ ಇವರು ಸ್ವಾಗತಿಸಿ, ಹಿತಾಶ್ರೀ ಕೆ. ವಂದನಾರ್ಪಣೆಗೈದರು. ಆಜ್ಞಶ್ರೀ ರೈ ಡಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.










